ಮನೆ ವ್ಯಕ್ತಿತ್ವ ವಿಕಸನ ಜೀವನ ದೃಷ್ಟಿಯ ವೈಶಾಲ್ಯತೆ

ಜೀವನ ದೃಷ್ಟಿಯ ವೈಶಾಲ್ಯತೆ

0

“ಕುಲವಿಲ್ಲ ಯೋಗಿಗೆ, ಛಲವಿಲ್ಲ ಜ್ಞಾನಿಗೆ, ತಲೆಗಂಬವಿಲ್ಲ ಗಗನಕೆ” ಎಂಬ ಸರ್ವಜ್ಞ ಕವಿ ಹೇಳುತ್ತಾನೆ. ಸರಳವಾದ ಸಂಗತಿಗಳಂತೆ ತೋರುವ ಸರ್ವಜ್ಞನ ಮಾತುಗಳು ವ್ಯಕ್ತಿತ್ವದ ಆಳವಾದ ತಿಳುವಳಿಕೆಗಳನ್ನು ಹೊಂದಿದೆ.

ಯೋಗಿಯು ಸಾಮಾಜಿಕವಾದ ಕಟ್ಟುಪಾಡುಗಳನ್ನೆಲ್ಲ ಮೀರಿ ಬೆಳೆದಿರುತ್ತಾನೆ. ಅವನು ತನ್ನದೇ ಆದ ಸ್ವತಂತ್ರ ನಿಯಮಗಳನ್ನು ಹೊಂದಿರುತ್ತಾನೆ. ಅಂತಹ ಯೋಗ್ಯತೆಗೆ ಜಾತಿ, ಮತ, ಕುಲ, ಪಂಥ ಯಾವುದರ ಅಗತ್ಯವೂ ಇರುವುದಿಲ್ಲ. ಹಾಗೆ ನಮ್ಮ ಯಾವುದೇ ನಡವಳಿಕೆಗಳ ಪರಿಣಾಮಕ್ಕೆ ಒಂದು ಕಾಲಮಿತಿ ಇರುತ್ತದೆ. ನೀವು ಮೂರನೇ ತರಗತಿಯಲ್ಲೂ, ನಾಲ್ಕನೇ ತರಗತಿಯಲ್ಲೂ, ಇದ್ದಾಗ ಯಾರ ಜೊತೆಗೂ ಜಗಳ, ಮನಸ್ತಾಪಗಳೆಲ್ಲ ನಡೆದು ಅದಕ್ಕಾಗಿ ಒಂದೆರಡು ತಿಂಗಳುಗಳ ಕಾಲ ತಲೆಕೆಡಿಸಿಕೊಂಡು ಯೋಚಿಸುತ್ತಿದ್ದಿರಬಹುದು.

ಆದರೆ ಈಗ ಅದಕ್ಕೆಲ್ಲ ಯಾವ ಮಹತ್ವವು ಬರುವುದಿಲ್ಲ. ಹಾಗಿದ್ದರೆ, ಅಂದು ಅಷ್ಟೆಲ್ಲ ತಲೆಕೆಡಿಸಿಕೊಂಡದ್ದು ಮೂರ್ಖತನವಲ್ಲವೇ. ನಿಜ, ಇಂದಿಗೆ ಅದು ಮೂರ್ಖತನ ಆದರೆ ಅಂದು ಮೂರ್ಖತನವಾಗಿರಲಿಲ್ಲ. ಅಂದು ಅವಶ್ಯಕತೆಯಾಗಿತ್ತು. ನಿಮ್ಮ ತಂದೆ, ಅಜ್ಜ, ಮುತ್ತಜ್ಜ ಇನ್ನು ಮುಂದೆ ಹೋದರೆ ಅವರ ತಂದೆಯ ಹೆಸರು ನಿಮಗೆ ಗೊತ್ತಿರುತ್ತದೆ. ಆದರೆ ನಿಮ್ಮ ಮುತ್ತಜ್ಜನ ಮುತ್ತಜ್ಜ ಯಾರು ಎಂದು ಕೇಳಿದರೆ, ಅವರ ಹೆಸರು ಗೊತ್ತಿರುವುದಿಲ್ಲ.

ನಿಮ್ಮ ಮುತ್ತಜ್ಜನ, ಮುತ್ತಜ್ಜ ಸುಮಾರು 300-400 ವರ್ಷಗಳ ಹಿಂದೆ ಬದುಕಿರಬಹುದು ಎಂದು ಭಾವಿಸಿ, ಹಾಗಾದ್ರೆ ಇನ್ನು 300-400 ವರ್ಷಗಳ ನಂತರ ನಮ್ಮ ಪರಿಸ್ಥಿತಿ ಏನಾಗಿರುತ್ತದೆ. ನಮ್ಮ ಹೆಸರುಗಳೆ ಗೊತ್ತಿರುವುದಿಲ್ಲ. ಈ ಸತ್ಯ ಸಂಗತಿಯೂ ನಮಗೆ ಗೊತ್ತಿರುತ್ತದೆ. ಆದರೆ, ನಮ್ಮ ನಡವಳಿಕೆಯನ್ನು ನಿಯಂತ್ರಿಸುವುದಿಲ್ಲ ಜ್ಞಾನಿಗೆ ಹಾಗಲ್ಲ ಜ್ಞಾನಿಯು ನಡವಳಿಕೆಯನ್ನು ಕೂಡ ಸತ್ಯ ಸಂಗತಿಯೇ ನಿಯಂತ್ರಿಸುತ್ತದೆ. ಆದ್ದರಿಂದ ಜ್ಞಾನಿಯು ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ.

ಆದರೆ ಅವನಲ್ಲಿ ಛಲಬರುವುದಿಲ್ಲ. ಆದ್ದರಿಂದ ಅವನು ಜಗಳವಾಡಲು, ಬಡಿದಾಡಲು ಹೋಗುವುದಿಲ್ಲ. ಒಳ್ಳೆಯದಾದಾಗ ವಿಷಯ ವಿಪರೀತ ಸಂತೋಷವನ್ನು ಕೊಡುವುದಿಲ್ಲ. ಕೆಟ್ಟದಾದಾಗ ವಿಪರೀತ ದುಃಖವನ್ನು ಪಡುವುದಿಲ್ಲ…..

 ಆದರಿಂದಾಗಿ ಅವನ ವ್ಯಕ್ತಿತ್ವ ಸ್ಥಿರತೆ ಮತ್ತು ಸ್ಥಿತ ಪ್ರಜ್ಞತೆ ಬಂದಿರುತ್ತದೆ. ನಮ್ಮ ಮನೆಯಲ್ಲಿ ದುರಂತವಾದರೆ ನಮಗೆ ವಿಪರೀತ ದುಃಖವಾಗುತ್ತದೆ. ನಮ್ಮೂರಿನಲ್ಲಿ ದುರಂತವಾದಾಗ ನಮ್ಮ ಮನೆಯಲ್ಲಿನ ದುರಂತದಷ್ಟು ತೀಕ್ಷ್ಣವಾಗಿ ದುಃಖ ಆಗುದಿಲ್ಲ. ರಾಜ್ಯದಲ್ಲಿ ದುರಂತವಾದಾಗ ದುಃಖದ ತೀವ್ರತೆ ಇನ್ನೂ ಕಡಿಮೆ.

ಲ್ಯಾಟಿನಾಮೆರಿಕದಲ್ಲಿ ಒಂದು ದುರಂತವಾದಾಗ ಅದರ ಕುರಿತಾಗಿ ನಾವು ಯೋಚಿಸುವುದಿಲ್ಲ. ಯಾಕೆಂದರೆ ಇದು ನನ್ನದು ಎಂಬ ಭಾವನೆ ತೀವ್ರತೆಯಲ್ಲಿ ವ್ಯತ್ಯಾಸ ಇರುತ್ತದೆ. ಜ್ಞಾನಿಗೆ ಈ ವ್ಯತ್ಯಾಸಇಲ್ಲ. ಇಡೀ ಜಗತ್ತು ಅವನಿಗೆ ತನ್ನದೆಂಬ ಭಾವನೆ ಇರುತ್ತದೆ. ಎಲ್ಲೇ ದುರಂತವಾದರೂ ಅವನನ್ನು ಅದು ನೋಯಿಸುತ್ತದೆ. ಆದರೆ ನೋವನ್ನು ಸ್ಥಿರ ಚಿತ್ರದಿಂದ ಸ್ವೀಕರಿಸುತ್ತಾನೆ. ಜೀವನ ಸೃಷ್ಟಿಯ ವೈಶಾಲ್ಯತೆಯು ಆಧ್ಯಾತ್ಮಿಕವಾಗುತ್ತಾ ಹೋಗುವುದು ಹೀಗೆಯೇ. ಜ್ಞಾನವೇ ಅದರ ದಾರಿ.

ಹಿಂದಿನ ಲೇಖನಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ‌
ಮುಂದಿನ ಲೇಖನಬಾಗಲಕೋಟೆ: ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೆದಾರ್