‘ವಾಲಖಿಲ್ಯ’ರು ಸೃಷ್ಟಿಕರ್ತನಾದ ಬ್ರಹ್ಮನಿಂದ ಜನಿಸಿದವರು ; ದೇವಯೋನಿಗಳು. ಇವರ ಸಂಖ್ಯೆ ಅರವತ್ತು ಸಾವಿರ.ಇವರು ಸದಾ ಸೂರ್ಯನ ರಥವನ್ನು ಹಿಂಬಾಲಿಸುತ್ತಿರುತ್ತಾರೆ. ಕಾಳಿದಾಸ ಮಹಾಕವಿಯ ‘ರಘುವಂಶ ’ಮಹಾ ಕಾವ್ಯದಲ್ಲಿ ವಾಲಖಿಲ್ಯರ ಬಗ್ಗೆ ಪ್ರಸ್ತಾಪವಿದೆ.
‘ವಾಲಖಿಲ್ಯಾಸನ’ವು ಕಠಿಣವಾದದ್ದು ‘ಏಕಪಾದ ರಾಜಕಪೋತಾಸನ ಒಂದು ರಲ್ಲಿ ನೈಪುಣ್ಯವನ್ನು ಗಳಿಸಿದರೆ, ಈ ಆಸನವನ್ನು ಸುಲಭವಾಗಿಯೂ ಶ್ರಮರಹಿತವಾಗಿಯೂ ಮಾಡಲು ಸಾಧ್ಯ.
ಅಭ್ಯಾಸ ಕ್ರಮ :
1. ಮೊದಲು ’ಏಕಪಾದ ರಾಜಕಪೋತಾಸನ ಒಂದ’ರ ಭಂಗಿಯಲ್ಲಿ ನಿಲ್ಲಬೇಕು.ಎಡಗಾಲಿನ ಹರಡನ್ನು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡು, ಆ ಬಳಿಕ ಟೊಂಕಗಳನ್ನು ಕುಗ್ಗಿಸಿ ಬೆನ್ನೆಲುಬಿನ ಕೆಳಬದಿಯಲ್ಲಿಯ ತ್ರಿಕೋನಾಕಾರದ ತ್ರಿಕಾಸ್ಥಿತಿಯನ್ನು ಮೇಲ್ಗಡೆಗೆ ಸರಿಸಬೇಕು. ಕಾಲಿನ ಹರಡನ್ನು ಬಿಡಿಸದೆ ಎಡಗಾಲನ್ನು ಹಿಂದೆಕ್ಕೆ ಹಿಗ್ಗಿಸಿ ಆಮೇಲೆ ಕೆಲವು ಸಲ ಉಸಿರಾಟ ನಡೆಸಬೇಕು.
2. ಬಳಿಕ,ಉಸಿರನ್ನು ಹೊರ ಬಿಟ್ಟು ತೋಳುಗಳನ್ನು ಮತ್ತಷ್ಟು ಹಿಗ್ಗಿಸಿ ನೇರಮಾಡಿ ಕಾಲನ್ನು ಹಿಂದೆ ನೂಕಿ,ಅದನ್ನು ನೆಲಮೇಲೆ ಚಪ್ಪಟೆಯಾಗಿ ಒರಗುಂತೆ ಮಾಡಬೇಕು.
3. ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನೆಲೆಸಬೇಕು.ಇದರಲ್ಲಿ ಎದೆಯು ಪೂರಾ ಹಿಗುವುದರಿಂದಲೂ ಮತ್ತು ಕಿಬ್ಬೊಟ್ಟೆಯು ಸಂಕೋಚನ ಸ್ಥಿತಿ ಹೊಂದಿರುವುದರಿಂದಲೂ ಉಸಿರಾಟದ ವೇಗವು ಹೆಚ್ಚು ಅದು ಹೆಚ್ಚು ಶ್ರಮದಿಂದ ನಡೆಯುವಂತಾಗುತ್ತದೆ.
4. ಈಗ ಕಾಲ್ಗಿನಣ್ಣಿನ ಮೇಲಣ ಬಿಗಿತವನ್ನು ಸಡಿಲಿಸಿ ಬೆನ್ನನ್ನು ನೆಟ್ಟಗೆ ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕು.
5. ಇನ್ನೊಂದು ಕಡೆಯಲ್ಲಿಯೂ ಈ ಭಂಗಿಯನ್ನು ಮತ್ತೆ ಮಾಡಿ, ಅದರಲ್ಲಿಯೂ ಹಿಂದಿನಷ್ಟು ಕಾಲವೇ ನೆಲೆಸಬೇಕು.
ಪರಿಣಾಮಗಳು :
ಈ ಭಂಗಿಯು ತೋರಿಸಿರುವ ‘ಜಾನುಶೀರ್ಷಾಸನ’ದ ಜನನಿಗೆ ವಿರುದ್ಧ ದಿಕ್ಕಿನಲ್ಲಿರುವುದರಿಂದ ಇದು ಬೆನ್ನೆಲುಬಿನ ಕೆಳಭಾಗಕ್ಕೆ ತಾರುಣ್ಯವನ್ನು ಕಲ್ಪಿಸುತ್ತದೆ. ಈ ಆಸನಾಭ್ಯಾಸದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತವು ಗುಹ್ಯ ಪ್ರದೇಶದ ಮೇಲ್ಭಾಗದ ಸುತ್ತಲೂ ಸಂಚರಿಸುವುದರಿಂದ ಅದನ್ನು ತುಂಬಾ ಆರೋಗ್ಯ ಸ್ಥಿತಿಯಲ್ಲಿ ಇಡುವುದಕ್ಕೆ ಇದು ನೆರವಾಗುತ್ತದೆ. ಈ ಆಸನವನ್ನೂ ಮತ್ತು ‘ರಾಜಕಪೋತಾಸನ’ ಚಕ್ರದ ಇತರ ಭಂಗಿಗಳನ್ನೂ ಅಭ್ಯಸಿಸುವುದರಿಂದ ಮೂತ್ರ ವಿಸರ್ಜನೆಯ ವ್ಯವಸ್ಥೆಯಲ್ಲಿ ಏನಾದರೂ ನ್ಯೂನ್ಯತೆಯಿದ್ದರೆ ಅವೆಲ್ಲವೂ ಸರಿಹೋಗುತ್ತವೆ ಕತ್ತಿನ ಮತ್ತು ಭುಜಗಳ ಮಾಂಸ ಖಂಡಗಳಿಗೆ ಇದರಿಂದ ಒಳ್ಳೆಯ ಆಗಮರ್ದನ ದೊರಕುತ್ತದೆ. ಅಲ್ಲದೆ ಗೋಮಾಳದ ಹಿಂದಿನ ಭಾಗದ ಕಂಠ ಮನಿಯ ಮತ್ತು ಅದಕ್ಕೆ ಸಂಬಂಧಿಸಿದ ಇತರ ಗ್ರಂಥಿಗಳಿಗೂ ಮೂತ್ರ ಜನಾಕಾಂಗಗಳಿಗೂ ಮೇಲ್ಬದಿಯ ನಿರ್ನಾಳಗ್ರಂಥಿಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರಕ್ತವು ಒದಗುವದು ದಿಂದ ಅವುಗಳಲ್ಲಿ ನವ ಚೈತನ್ಯವು ಮೂಡುವುದು. ಮೈಥುನಾಪೇಕ್ಷೆಯ ನಿಯಂತ್ರಣಕ್ಕಾಗಿ ಈ ‘ರಾಜಕಪೋತಚಕ್ರ’ದ ಭಂಗಿಗಳ ಅಭ್ಯಾಸವನ್ನು ನಡೆಸಬೇಕೆಂದು ಸಲಹೆ ಮಾಡಲಾಗಿದೆ.