ಶ್ರೀರಂಗಪಟ್ಟಣ: ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಗಳ ಪೆರೇಡ್‌ನ್ನು ಕೆಆರ್‌ಎಸ್ ಪೊಲೀಸ್ ಠಾಣಾ ಆವರಣದಲ್ಲಿ ನಡೆಸಲಾಯಿತು.
ಸುಮಾರು 25 ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಗಳು ಪೆರೇಡ್ ನಲ್ಲಿ ಹಾಜರಿದ್ದರು, ಇವರ ಪ್ರಸ್ತುತ ವ್ಯಯಕ್ತಿಕ ಕೆಲಸಗಳು ಅವರ ಈಗಿನ ಜೀವನದ ಚಲನ ವಲನಗಳ ಕುರಿತು ಪ್ರತ್ಯೇಕವಾಗಿ ಮಾತನಾಡಿಸಿ ಅವರಿಂದ ಮಾಹಿತಿ ಗಳನ್ನು ಪಿ.ಎಸೈ ರಮೇಶ ಕರ್ಕಿಕಟ್ಟೆ ಪಡೆದುಕೊಂಡರು.
ನಂತರ ಯಾವುದೇ ಕಾನೂನ ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಸಿ, ಕೃತ್ಯಗಳಲ್ಲಿನ ಸಾಕ್ಷಿಗಳಿಗೆ ಯಾವುದೇ ಬೆದರಿಕಿ ಹಾಕಿದರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು.
ತಮ್ಮ ಹಿಂದಿನ ಕಾನೂನು ಬಾಹರ ಚಟುವಟಿಕೆಗಳ ಬಗ್ಗೆ ಯೋಚನೆ ಮಾಡಿ,ದಿನಗಳು ಮತ್ತೆ ಬರುವುದಿಲ್ಲ ಮುಂದೆ ಉತ್ತಮ ಜೀವನ ನಡೆಸಿ ಪೋಷಕರಿಗೆ ಉತ್ತಮ ಮಕ್ಕಳಾಗಿ ಎಂದರು.