ಮನೆ ಜ್ಯೋತಿಷ್ಯ ಅಸ್ತಮ

ಅಸ್ತಮ

0

 ಪ್ರಾಣಾಯಾಮ  :

        ಪ್ರಾಣಾಯಾಮದ ಜೊತೆಗೆ, ಹಗುರ ನಿಧಾನವಾಗಿ ಉಸಿರಾಟ, ಉಜ್ಜಿಯಿ ಪ್ರಾಣಾಯಾಮ ಮಾಡಿ. ಉಸಿರಾಟದ ವ್ಯಾಯಾಮ ಮಾಡುವುದು ಬಹಳ ಉತ್ತಮ.ಇದು ನಮ್ಮುಸಿರಾಟದ ಶಕ್ತಿಯನ್ನು ಹೆಚ್ಚಿಸುತ್ತದೆ.  ಶ್ವಾಸನಾಳದ ವ್ಯಾದಿ ನಿವಾರಿಸುತ್ತದೆ.ಶ್ವಾಸಕೋಶದ ಗಾತ್ರವನ್ನು ಹೆಚ್ಚಿಸುತ್ತದೆ. ಉಸಿರಾಟದ ಮಾಂಸಖಂಡಗಳು ಚಟುವಟಿಕೆಯಿಂದ ಕೂಡಿರುತ್ತದೆ. ಯೋಗಾಸನವನ್ನು ಪ್ರತಿದಿನ ಮಾಡುತ್ತಿರಬೇಕು.

Join Our Whatsapp Group

 ವ್ಯಾಯಮ  :

      ಓಡುವುದರಿಂದ ಬೆಟ್ಟ ಹತ್ತುವುರಿಂದ ತೀವ್ರವಾಗಿ ನಡೆಯುವುದರಿಂದ ಸೈಕಲ್ ಹೊಡೆಯುವುದರಿಂದ ನಮ್ಮ ಉಸಿರಾಟದ ವೇಗ ಹೆಚ್ಚಿ ಅದರ ಸಾಮರ್ಥ್ಯವೂ  ಹೆಚ್ಚಿಸುತ್ತದೆ.

 ಯೋಗಾಸನಗಳು  :

 ಗೋಮುಖಾಸನ  —   30 ಸೆಕೆಂಡಿನಿಂದ ಐದು ನಿಮಿಷ.

 ಭುಜಂಗಾಸನ  —   30 ಸೆಕೆಂಡುಗಳು

ಪಶ್ಚಿಮೋತ್ಥಾಸನ  — 1 ನಿಮಿಷ.

ಉಷ್ಟ್ರಾಸನ   —  ಮತ್ಸ್ಯಾಸನಗಳು.

 ಆದರೆ  — ಈ ಆಸನಗಳನ್ನು ಗರ್ಭಿಣಿ ಸ್ತ್ರೀಯರು,ಮೆದುಳು ತೊಂದರೆ, ತೀವ್ರತರ ಅಸ್ತಮ  ಇದ್ದರೂ ಮಾಡಬಾರದು.

1.ಸುಪ್ತವೀರಾಸನ  – ಕಾಲು ಮಡಚಿ ವಜ್ರಾಸನದ ಕುಳಿತುಕೊಳ್ಳಿ., ನಿಧಾನವಾಗಿ ಕಾಲು ಅಗಲಿಸಿ ಪುಷ್ಟ ನೇಲಕ್ಕೆ ತಾಗುವಂತೆ ಕುಳಿತುಕೊಳ್ಳಿ.ಕೈಗಳು ಅಗಲ ಮಾಡಿ ಪಕ್ಕಕ್ಕಿಟ್ಟು ನಿಧಾನವಾಗಿ ಹಿಂದಕ್ಕೆ ಮಲಗಿ ಕೈಗಳು ನಿಧಾನವಾಗಿ ತಲೆಯ ಹತ್ತಿರ ನೀಳಲವಾಗಿ ಮೇಲೆ ಬರುವಂತೆ ಎಳೆದುಕೊಳ್ಳಿ. ಈ ಸ್ಥಿತಿಯಲ್ಲಿ 5-10 ಬಾರಿ ಉಸಿರಾಡಿಸಿ. ಅಲ್ಲಿಯೇ ವಿಶ್ರಾಂತಿ ಪಡೆಯಿರಿ. ಆನಂತರ ನಿಧಾನವಾಗಿ ಕೈಗಳನ್ನು ಮೊದಲಿನಂತೆ ತೊಡೆಯ ಹತ್ತಿರ ತಂದು ಎಡ ಮುಗ್ಗುಲಿನಿಂದ ಮೇಲೆ ಏಳಿ.

2. ಸುಪ್ತಬದ್ಧ ಕೋನಾಸನ  – ಸುಪ್ತ ವೀರಾಸನದಂತೆಯೇ ನಿಧಾನವಾಗಿ ಮಲಗುವ ಮೊದಲು ಕೈಚಾಚದೇ ಕಾಲುಗಳನ್ನು ಹಿಡಿದುಕೊಂಡು ಆಸನ ಹಾಕಿ.

3. ಪರಿವೃತ್ತ ಜಾನು ಶ್ರೀರ್ಷಾಸನ  – ಕುಳಿತು ಎರಡು ಕಾಲುಗಳನ್ನು ಸಾಧ್ಯವಾದಷ್ಟು ಅಗಲ ಮಾಡಿ. ಬೆನ್ನು ಭುಜ ನೇರವಾಗಿರಲಿ. ನಿಧಾನವಾಗಿ ಬಲಗೈಯಿಂದ ಬಲಪಾದವನ್ನು ಮುಟ್ಟಿಸಿ,ಹಾಗೆ ಎಡಗೈಯನ್ನು ಬಲಗೈ ಮೇಲಿಡಿ.  ಕಾಲು ಕೊಂಕಿಸಬೇಡಿ.ಇದೇ ರೀತಿ ಎಡಗಾಲು 2 ಕೈಗಳಿಂದ ಮುಟ್ಟಿಸಿ ಇದನ್ನು ಪ್ರತಿದಿನ 3 – 4 ಬಾರಿ ಮಾಡಿ. ಅನಂತರ ನಿಮಗೆ ಸುಲಭವಾಗಿ ಈ ಆಸನ ಹಾಕಬಹುದು ಈ ಸ್ಥಿತಿಯಲ್ಲಿ 3-4 ಬಾರಿ ಉಸಿರಾಡಿ. ಇದರಿಂದ ಅಸ್ತಮ ವ್ಯಾಧಿ ದೂರವಾಗುತ್ತಾ ಹೋಗುತ್ತದೆ.

 ಜ್ಯೋತಿಷ್ಯ ಶಾಸ್ತ್ರದ ರೀತಿ :

 ಕಾರಕಗ್ರಹಗಳು – ಚಂದ್ರಬುಧರು.

 ಇವರು ಪೀಡಿತದ ಕುಜನಿಂದ ಪೀಡಿತರಾದರೆ ಧೂಳಿನ ಅಲರ್ಜಿಯಿಂದ ಆಸ್ತಮ.

 ರಾಶಿ  – ಮಿಥುನ ಕಟಕ ರಾಶಿ ಪಿಡಿತವಾದರೆ…..

 ಸ್ಥಾನಗಳಲ್ಲಿ – ಮೂರನೇ ಮತ್ತು ನಾಲ್ಕನೇ ಸ್ಥಾನ

 ಚಂದ್ರ ಕುಜನಿಂದ ಪಿರಿತನಾದಾಗ….

ಬುಧನು ಶ್ವಾಶಕೋಶ ಮತ್ತು ನರಗಳಕಾರಕ. ಇವರು ಪಿಡಿತರಾದಾಗ ಉಸಿರಾಟಕ್ಕೆ ತೊಂದರ ಶನಿಯು ಪೀಡಿತನಾದಾಗ ವಾತದಿಂದ ತೊಂದರೆ.  ಶ್ವಾಶಕೋಶ ಸಂಕುಚಿತಗೊಂಡು ಉಸಿರಾಟಕ್ಕೆ ತೊಂದರೆ, ದೀರ್ಘವ್ಯಾದಿ ಯಾಗಿ ಒಂದು ಸಲ ಆರಂಭವಾದರೆ ಜೀವ ಪೂರ್ತಿ ಕಾಡುತ್ತದೆ.

     ಇದು ನಮ್ಮ ದೇಹ ಪ್ರಕೃತಿಯಾಗಿ ಬರುತ್ತದೆ. ನಮ್ಮಲ್ಲಿ ವ್ಯಾಧಿ ಪ್ರತಿರೋಧಕಶಕ್ತಿ ಪ್ರಬಲವಾಗಿದ್ದರೆ ಈ ವ್ಯಾಧಿ ಬರುವುದು ಕಷ್ಟಕರ.

       ಅಲರ್ಜಿಗಳಿಗೆ ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಜ ಅಥವಾ ಶನಿಗೆ ಅಥವಾ ಈ ಎರಡೂ ಗ್ರಹಗಳಿಗೂ ಪರಿಹಾರ ಮಾಡಿದರೆ ಖಂಡಿತ ಎಷ್ಟೋ ವರ್ಷಗಳ ವ್ಯಾದಿಯನ್ನು ಪರಿಹರಿಸಬಹುದು.