ಮನೆ ದೇವಸ್ಥಾನ ಕೈವಾರ

ಕೈವಾರ

0

ಪುರಾಣ ಪ್ರಸಿದ್ಧವಾದ ಕ್ಷೇತ್ರ. ಇದು ಚಿಂತಾಮಣಿ ತಾಲೂಕಿನಲ್ಲಿ 13 ಕಿ.ಮೀ. ದೂರದಲ್ಲಿದೆ. ಈ ಊರಿಗೆ ಹಿಂದೆ ಏಕಚಕ್ರಪುರ ಎಂಬ ಹೆಸರಿದ್ದಿತು. ಮಹಾಭಾರತದ ಕಾಲದಲ್ಲಿ ಭೀಮನು ಇಲ್ಲಿಯ ಬಕಾಸುರ ಎಂಬ ರಾಕ್ಷಸನನ್ನು ಕೊಂದನೆಂದು ಹೇಳುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಊರಿಗೆ ಹತ್ತಿರದಲ್ಲಿ ಇರುವ ಚಿಕ್ಕ ಬೆಟ್ಟದಲ್ಲಿನ ಒಂದು ಗವಿಯಲ್ಲಿ ಭೀಮ ಬಕಾಸುರನನ್ನು ಕೊಂದ ಬಳಿಕ ಬಂಡೆಯನ್ನು ಹಾಕಿ ಮುಚ್ಚಿದನಂತೆ. ಕೆಲವು ಕಾಲಗಳಲ್ಲಿ ಆ ಗವಿಯ ಒಳಗಿಂದ ಬಿಳಿ ಬಣ್ಣ ಹಾಗೂ ಕೆಂಪು ಬಣ್ಣದ ನೀರು ಗವಿಯ ಮುಂದಿನ ಬಂಡೆಯ ಮೇಲೆ ಹರಿದು ತೊಟ್ಟಿಕ್ಕುತ್ತಿವೆಯಾಗಿ ಅದು ಬಕಾಸುರನ ದೇಹವು ಕಿವು ಮತ್ತು ರಕ್ತವೆಂದು ನಂಬಲಾಗಿದೆ.

ಕೈವಾರದಲ್ಲಿ ಅಮರನಾರಾಯಣಸ್ವಾಮಿ ದೇವಸ್ಥಾನವಿದೆ. ಅಮರನಾರಾಯಣ ಹೊಯ್ಸಳ ವಿಷ್ಣುವರ್ಧನನು ಸ್ಥಾಪಿಸಿದ ಪಂಚ ನಾರಾಯಣನ ಮೂರ್ತಿಗಳಲ್ಲಿ ಒಂದು ಎನ್ನಲಾಗಿದೆ. ಉಳಿದ ನಾಲ್ಕು ನಾರಾಯಣ ಮೂರ್ತಿಗಳೆಂದರೆ, 

1.ಬೂದಿಗೆರೆಯ ದೇಶನಾರಾಯಣ

2.ಬಂಕಾಪುರದ ವಿಜಯನಾರಾಯಣ

3.ತಲಕಾಡಿನ ಕೀರ್ತಿ ನಾರಾಯಣ

4.ಗದುಗಿನ ವೀರನಾರಾಯಣ

ಕೈವಾರದಲಿ ಹಿಂದೆ ವಾಸಿಸಿದ್ದ ಕಾಲಜ್ಞಾನ ಗ್ರಂಥ ರಚಿಸಿದ ಅವಧೂತಯೋಗಿ ನಾರಾಯಣಪ್ಪನವರ ಸಮಾಧಿ ಇದೆ. ಇವರಿಗೆ ತಾತಯ್ಯ ಎಂದೂ ಹೆಸರಿತ್ತು. ಮೊದಲಿಗೆ ಇವರು ಬಳೆಗಾರರಾಗಿದ್ದರು.

ಕೈವಾರ ಕ್ಷೇತ್ರವು ಪ್ರಸಿದ್ಧ ಕಂಟ್ರಾಕ್ಟರ್ ಆಗಿದ್ದ ಶ್ರೀ ಎಂ.ಎಸ್.ರಾಮಯ್ಯ ಅಭಿವೃದ್ಧಿಗೊಳಿಸಿರುವರು.

ಹಿಂದಿನ ಲೇಖನಮೈಸೂರು: ಸಚಿವ ಭೈರತಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರು
ಮುಂದಿನ ಲೇಖನಸನಾತನ ಧರ್ಮದ ಕುರಿತ ಹೇಳಿಕೆ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್