ಮನೆ ಜ್ಯೋತಿಷ್ಯ ಚಿತ್ತಾ ನಕ್ಷತ್ರ ಮತ್ತು ಜಾತಕ

ಚಿತ್ತಾ ನಕ್ಷತ್ರ ಮತ್ತು ಜಾತಕ

0

      ಚಿತ್ತಾ ನಕ್ಷತ್ರದ ಪೂರ್ವಾರ್ಥ ಕ್ಷೇತ್ರದ ವ್ಯಾಪ್ತಿ 23 ಅಂಸ 20 ಕಲಾ ಕನ್ಯಾದಿಂದ 20 ಅಂಶ ಕನ್ಯಾ ರಾಶಿಯವರಿಗೆ. ರಾಶಿ ಸ್ವಾಮಿ ಬುಧ, ನಕ್ಷತ್ರ ಸ್ವಾಮಿ ಮಂಗಳ,ನಕ್ಷತ್ರ ದೇವತೆ ತ್ವಷ್ಟ್ರ, ತಾರಾಸಮೂಹ ಒಂದು ಆಕಾಶ ಭಾಗ ಮಧ್ಯ, ಮಧ್ಯನಾಡಿ, ವ್ಯಾಘ್ರಯೋನಿ, ರಾಕ್ಷಸಗಣ,ನಾಮಾಕ್ಷರ ಡೇ, ಡೋ, ಈ,ನಕ್ಷತ್ರದ ಪೂರ್ವಾರ್ಧ ಭಾಗ ಪ್ರತಿನಿಧಿಸುವ ಜಾತಕನ ಶರೀರ ಭಾಗ ಉದರದ ಕೆಳಭಾಗ.

 ಚಿತ್ತಾ ನಕ್ಷತ್ರದ ಜಾತಕನ ಸ್ವರೂಪ  :

       ಹಾಸ್ಯಪ್ರಿಯ, ದಕ್ಷತೆ ಪ್ರಾಪ್ತಿ ಹೊಂದುವವ ಪ್ರಯೋಗವಾದಿ, ವ್ಯವಹಾರಿಕ, ವ್ಯಾಪಾರದ ಇಚ್ಛುಕ,ಸಾಹಸಿ, ಸ್ಪಷ್ಟವಾದಿ, ಬಲಿಷ್ಠ ಉದ್ಯಮಿ, ಚುರುಕು ಪ್ರವೃತ್ತಿ ತೀಕ್ಷಣ ಪ್ರವೃತ್ತಿಯವ, ವ್ಯಯಿ, ತರ್ಕಪ್ರಧಾನ, ಅಸಹನೆಯ,  ಧೈರ್ಯ ಹೀನ,ಶೀಘ್ರಕೋಪಿ,ಒಂದು ವೇಳೆ ಸ್ತ್ರೀಯರಾಗಿದ್ದರೆ ಮಾತು ಮಾತಿಗೂ ಮುನಿಸಿಕೊಳ್ಳುವ ನಾಟಕ ವಾಡುವವಳು, ಅಧಿಕ ಕೆಲಸ ಮಾಡುವ, ಸುಂದರ ವಸ್ತ್ರ ಮತ್ತು ಆಭರಣಗಳು ಅಥವಾ ವಸ್ತ್ರಗಳಲ್ಲಿ ಅಭಿರುಚಿಯುಳ್ಳವ, ಕೆಂಪು ಮತ್ತು ಹಸಿರು ವರ್ಣದ ಪದಾರ್ಥಗಳನ್ನು ಹೆಚ್ಚು ಇಷ್ಟಪಡುವವ,ಪುಷ್ಪಾದಿಗಳನ್ನು ಧಾರಣೆ ಮಾಡುವವ, ಸುಂದರ ನೇತ್ರದವ, ಮಾತುಕತೆಯಲ್ಲಿ ಚತುರ ಮತ್ತು ಕುಶಲ ಸುದ್ದಿಗಾರ, ಭವ್ಯ ಆಕೃತಿಯವ,

 ಚಿತ್ತಾ ಜಾತಕನ ಉದ್ಯೋಗ :

       ಮೆಕಾನಿಕಲ್ ಇಂಜಿನಿಯರ್, ಪ್ರೀತಿಕಾಂರಗ, ಪ್ರಕಾಶ, ಮನೆ ನಿರ್ಮಾಣ ಅಭಿಯಂತ,ಕಾರ್ಮಿಕ, ಕುತ್ತಿಗೆದಾರ, ದಾಲಾಲ, ಜೈಲು ವಿಭಾಗ ನಿರಕ್ಷಕ, ಪೌಜಧಾರಿ ನ್ಯಾಯವಾದಿ, ಕರವಿಭಾಗ ಸುಂಕ, ಸರ್ವೇಯರ್, ಆದಾಯಕರ ನಿರೀಕ್ಷಕ,ಹಣಕಾಸು ಮಂತ್ರಾಲಯ, ಕಾರ್ಖಾನೆ, ಉದ್ಯೋಗ, ವಿದ್ಯುತ್ ಉಪಕರಣಗಳು, ವಿದ್ಯುತ್ ಇಲಾಖೆ, ಟರ್ನರ್,ಗಣಿ,  ದೈಹಿಕ ತಜ್ಞ, ಶಸ್ತ್ರಚಿಕಿತ್ಸಕ ಕಂದಕ,ಬೆರಳಚ್ಚು ತಜ್ಞ,ಸಂಚಾರ ವಿಭಾಗದ ಪೇದೆ, ವೆಚ್ಚದಲ್ಲಿ ಲೆಕ್ಕಬರೆಯುವವ, ಆಭರಣ,ಕರಕುಶಲ,ಲೇಖಕ, ಸುಗಂಧಿತ ಪದಾರ್ಥಗಳ ಉತ್ಪಾದಕ ಗಣಕಯಂತ್ರ,ನೇಕಾರ,  ಗಣಿತಜ್ಞ.

 ಚಿತ್ತಾ ಜಾತಕಾನ ರೋಗ :

        ಆಲ್ಸರ್, ತೀಕ್ಷ್ಣಪೀಡೆ,  ಕಾಲರಾ, ಪಿತ್ತ ಪ್ರಕೃತಿ,ಕೋಪ, ತಿಕ್ಷಣ ಪ್ರವೃತಿ,ಅಧಿಕ ನಗುವುದು, ಉದರದಲ್ಲಿ ಕ್ರೀಮಿ ತುರಿಕೆ, ಉತ್ತೇಜನೆ, ಕಜ್ಜಿ ಪಾದದಲ್ಲಿ ಪೀಡೆ,ಶುಷ್ಕಸೆಡೆತ,ಕೀಟಗಳು ಕಚ್ಚುವುದರಿಂದ ಗಾಯ ದುಷ್ಟತನ,ಕ್ರೌರ್ಯ.

 ವಿಶೇಷ :

          ಬುಧನ ರಾಶಿ ಮತ್ತು ಮಂಗಳನ ನಕ್ಷತ್ರ ಭಾಗದಲ್ಲಿ ಜನಿಸಿದ ಇಂಥ ಜಾತಕರು ಅಧಿಕಾಂಶ ಇಂದ್ರಿಯ ರೋಗಗಳಿಂದ ಪೀಡಿತರಾಗಿರುತ್ತಾರೆ. ಇವರಿಗೆ ನೇತ್ರರೋಗ ಅಥವಾ ಕರ್ಣರೋಗಗಳು ವಿಶೇಷವಾಗಿ ಪೀಡಿಸುತ್ತವೆ ಇಂಥ ಜಾತಕರು ಅದ್ಭುತ ಕಾರ್ಯಗಳನ್ನು ಮಾಡಲು .ಸಾಮರ್ಥ್ಯ, ನಾಯಕ ಅಥವಾ ನಾಯಕನ ಪದವಿಗೆ ಪ್ರೋತ್ಸಾಹಿತರಾಗುವವರಾಗಿರುತ್ತಾರೆ ಮತ್ತು ದೈಹಿಕ ಬಲ ವೃ ದ್ಧಿಸುವುದರಲ್ಲಿ ಪ್ರಯುತ್ನಶೀಲ, ಸಾಧಾರಣ ಆರ್ಥಿಕ ಸ್ಥಿತಿ, ವಿದ್ಯಾಭ್ಯಾಸಗಳು, ಅನುಭವಿ ಹಾಗೂ ಶತ್ರುಗಳ ಮೇಲೆ ಆಕಸ್ಮಿಕವಾಗಿ ಆಕ್ರಮಣ ಮಾಡುವವರು ಕೂಡ ಆಗುತ್ತಾರೆ. ಆಕೃತಿ ಸಾಧಾರಣವಾಗಿ ನೀಳವಾಗಿರುತ್ತದೆ ಮತ್ತು ಬಾಹ್ಯ ಚಾರಿದಲ್ಲಿತ್ರ್ಯದಲ್ಲಿ ಪ್ರಾಮಾಣಿಕತೆ ತುಂಬಾ ವಿಶೇಷವಾಗಿ ಕಂಡುಬರುತ್ತದೆ.

      ಸೂರ್ಯ ಈ ನಕ್ಷತ್ರದ ಭಾಗದ ಮೇಲೆ ಅಶ್ವಿಜ ಮಾಸದ ಅಂತ್ಯದಲ್ಲಿ ಸುಮಾರು ಆರೂವರೆ ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ 27ನೇ ದಿನ ಸುಮಾರು 12 ಗಂಟೆಗಳವರೆಗೆ ಇರುತ್ತಾನೆ.

 ಚರಣದ ಸ್ವಾಮಿ ಫಲ :

 ★ಪ್ರಥಮ ಚರಣದ ಸ್ವಾಮಿ ಮಂಗಳ ಸೂರ್ಯ ಜಾತಕನಲ್ಲಿ ಅಧಿಕಾರದ ಭಾವನೆ ವೃದ್ಧಿ  ಮಾಡುವರು.

 ★ ದ್ವಿತೀಯ ಚರಣದಲ್ಲಿ ಜಾತಕನ ಪ್ರವೃತ್ತಿಯಲ್ಲಿ ವೃದ್ಧಿಯಾಗುತ್ತದೆ.

★ ತೃತೀಯ ಚರಣದ ಸ್ವಾಮಿ ಮಂಗಳ ಶುಕ್ರ ಜಾತಕಾನಲ್ಲಿ ಭಾವನೆಗಳ ಉದಯ ಮಾಡುವರು.

 ★ಚತುರ್ಥ ಚರಣದ ಸ್ವಾಮಿ ಮಂಗಳ -ಮಂಗಳ ಆವೇಶಮಯ,ಆತ್ಮಾ ಭ್ಯಾಸಿಯನ್ನಾಗಿ ಮಾಡುವನು.