ವಿಪರೀತ’ = ವಿಲೋಮ ವಿರುದ್ಧದಿಕ್ಕು ಶಲಭ= ಮಿಡಿತ.
ಈ ಆಸನದ ಭಂಗಿಯಲ್ಲಿ ‘ಗಂಡಬೇರುಂಡಾಸನ’ ದಲಾಗುವುದಕ್ಕಿಂತಲೂ ಹೆಚ್ಚಾಗಿ ದೇಹವು ಹಿಗ್ಗುವಿಕೆಗೆ ಒಳಗುಗುತ್ತದೆ.ಇದರ ಚಲನಗಳು ‘ಹಲಾಸನ ದಲ್ಲಾಗುವಪತ್ರ ಚಲನೆಗಳ ವಿಲೋಮ ಅಂದರೆ ವಿರುದ್ಧ ದಿಕ್ಕಿನವು
ಅಭ್ಯಾಸ ಕ್ರಮಗಳು
೧. ಮೊದಲು, ಈ ಹಿಂದಿನ ಆಸನದಲ್ಲಿದ್ದಂತೆ ಜಮಖಾನವನ್ನು ಮಡಿಕೆಹಾಕಿ, ಅದನ್ನು ನೆಲದಮೇಲೆ ಹಾಸಿ, ಅದರ ಮೇಲೆ ಅಭ್ಯಾಸಕನು ಕೆಳಮೊಗಮಾಡಿ ಹೊಟ್ಟೆಯನ್ನೂರಿ ಉದ್ದಕ್ಕೂ ಚಪ್ಪಟೆಯಾಗಿ ಮಲಗಬೇಕು. ಬಳಿಕ ಕತ್ತನ್ನು ಹಿಗ್ಗಿಸಿ ಗದ್ದವನ್ನು ಜಮಾಖಾನದ ಮೇಲೆ ಬಿಗಿಯಾಗಿ ಊರಿಡಬೇಕು. ಇಲ್ಲವಾದರೆ ಅದು ಮುಂದಕ್ಕೆ ಸರಿದುಕೊಂಡು ಹೋಗುತ್ತದೆ. ಅಂದರೆ ಸ್ಥಳ ಬಿಟ್ಟು ಜರಗುತ್ತದೆ.
೨. ಆಮೇಲೆ, ಮೊಣಕೈಗಳನ್ನು ಬಗ್ಗಿಸಿ ಅಂಗೈಗಳನ್ನು ಎದೆಯಮೇಲಿಟ್ಟು ಕೈಬೆರಳುಗಳನ್ನು ತಲೆಯ ದಿಕ್ಕಿಗೆ ತುದಿಮಾಡಬೇಕು.
೩. ಬಳಿಕ, ಉಸಿರನ್ನು ಹೊರಕ್ಕೆಬಿಟ್ಟು ಮಂಡಿಗಳನ್ನು ಬಾಗಿಸಿ ಮೇಲೆತ್ತಿ ಪಾದಗಳನ್ನು ಎದೆಯ ಕಡೆಗೆ ಸರಿಸಬೇಕು. ಅನಂತರ ಎದೆಯನ್ನು ನೆಲದಮೇಲಿಂದ ಸ್ವಲ್ಪ ಎತ್ತರಿಸಬೇಕು.
೪. ಇದಾದಮೇಲೆ, ಕೆಲವು ಸಲ ಉಸಿರಾಟ ನಡೆಸಿ, ಬಳಕ ಉಸಿರನ್ನು ಹೊರಕ್ಕೆ ಬಿಡುತ್ತ ಕಾಲುಗಳನ್ನು ಆಕಾಶದ ಕಡೆಗೆ ಝಾಡಿಸಿ ಒದರಿ, ದೇಹವನ್ನು ಹಿಗ್ಗಿಸಿ ಸಮತೋಲನಸ್ಥಿತಿಯಲ್ಲಿ ನೆಲೆಸಬೇಕು. (ಚಿತ್ರ 572) ಹಾಗೆ ಮಾಡುವಾಗ ದೇಹದ ಇಡೀ ಭಾರವನ್ನು ಗದ್ದ ಕತ್ತು, ಹೆಗಲುಗಳು, ಮೊಣಕೈಗಳು ಮತ್ತು ಕೈ ಮಣಿಕಟ್ಟುಗಳಿಗೆ ವಹಿಸಬೇಕು. ಆಮೇಲೆ ಸಾಧಾರಣ ರೀತಿಯಿಂದ ಉಸಿರಾಟ ನಡೆಸಲು ಯತ್ನಿಸಬೇಕು.
೫ ಮತ್ತೆ ಉಸಿರನ್ನು ಹೊರಬಿಟ್ಟು ಮಂಡಿಗಳನ್ನು ಬಗ್ಗಿಸಿ ಕಾಲುಗಳನ್ನು ಕೆಳಗಿಳಿಸಿ ಪಾದಗಳನ್ನು ತಲೆಯಮೇಲೆ ಅದನ್ನು ದಾಟುವಂತೆ ಸರಿಸಿ ಕಾಲ್ಬೆರಳುಗಳನ್ನು ನೆಲಕ್ಕೆ ಅಂಟಿಸಿಡಬೇಕು ಆ ಬಳಿಕ, ಪಾದಗಳನ್ನು ಸಾಧ್ಯವಾಗುವನ್ನೂ ಮುಂದಮಂದಕ್ಕೆ ಸರಿಸಿ ಕಾಲುಗಳನ್ನು ಅದಷ್ಟೂ ನೇರಮಾಡಿಡಲು ಯತ್ನಿಸಬೇಕು ಅಲ್ಲದೆ ಕೈಗಳನ್ನು ಹಿಂದು ನೀಳವಾಗಿ ಚಾಚಿ ಅಂಗೈಗಳನ್ನು ಕೆಳಮೊಗಮಾಡಿ ನೆಲದಮೇಲಿಡಬೇಕು.
೬. ಅನಂತರ ಈ ಭಂಗಿಯಲ್ಲಿ ಕೆಲವುಸೆಕೆಂಡುಗಳ ಕಾಲ ನೆಲೆಸಬೇಕು. ಈಗ ಈ ಭಂಗಿಯು ‘ಹಲಾಸನ’ವನ್ನು ಅನುಕರಿಸುವಂತೆ ಕಾಣುತ್ತದೆ. ಬೆನ್ನುಹುರಿಯು ಹಿಗ್ಗುವುದರಿಂದಲೂ, ಒತ್ತಡದಿಂದ ಕಿಬೊಟ್ಟೆಯ ಭಾಗ ವು ಕುಗ್ಗುವುದರಿಂದಲೂ ಉಸಿರಾಟವು ಅತಿವೇಗವಾಗಿಯೂ ಶ್ರಮದಿಂದ ಕೂಡಿಯೂ ಇರುತ್ತದೆ. ಆಗ ಉಸಿರನ್ನು ಒಳಗೆ ಹಿಡಿದಿಡಲು ಯತ್ನಿಸಬಾರದು.
೭. ಬಳಿಕ ಮೊಣಕಾಲಗಳನ್ನು ಬಗ್ಗಿಸಿ, ತೋಳುಗಳನ್ನು ಅಗಲಿಸಿ, ಕೈಗಳನ್ನು ಭುಜಗಳ ಬಳಿಗೆ ತಂದು ಅಂಗೈಗಳನ್ನು ನೆಲದಮೇಲೆ ಇರಿಸಬೇಕು. ಆಮೇಲೆ ಮಂಡಿಗಳನ್ನು ಬಗ್ಗಿಸಿ ಪಾದಗಳನ್ನು ತಲೆಯ ಬಳಿ ತಂದು (ಚಿತ್ರ 582) ಗದ್ದವನ್ನೊರಿಟ್ಟು ದೇಹವನ್ನು ಹೊರಳಸಿ , ‘ಊರ್ಧಧನುರಾಸನ’ದ (ಚಿತ್ರ 486) ಭಂಗಿಗೆ ಬಂದು, ಆಮೇಲೆ ‘ತಾಡಾಸನ’ ದಲ್ಲಿ (ಚಿತ್ರ 1) ನಿಲ್ಲಬೇಕು ಇಲ್ಲವೆ ಉಸಿರನ್ನು ಹೊರಕ್ಕೆಬಿಟ್ಟು ‘ವಿಪರೀತಚಕ್ರಾಸನ’ದ ಭಂಗಿಗಳನ್ನು ಅಭ್ಯಸಿಸಿ ಆ ತರುವಾಯ ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು :
ಈ ಆಸನದಿಂದಾಗುವ ಪರಿಣಾಮಗಳು ‘ಗಂಡಭೇರುಂಡಾಸನ’ ದಿಂದಾಗುವ ಪರಿಣಾಮಗಳಂತೆಯೇ ಇರುತ್ತವೆ. ಈ ಎರಡೂ ಆಸನಗಳ ಉದ್ದೇಶ ನಮ್ಮ ದೇಹದಲ್ಲಡಗಿರುವ ವಿಶ್ವದ ದೈವೀಕಶಕ್ತಿಯೇನಿಸಿದ (Divine Cosmic Energy) ‘ಕುಂಡಲಿನಿ ಶಕ್ತಿ’ಯನ್ನು ಜಾಗೃತಗೊಳಿಸುವುದು ಈ ‘ಕುಂಡಲಿನಿ’ಯು ಬೆನ್ನೆಲುಬಿನ ಕೆಳಭಾಗಕ್ಕೆ ಸರಿಯಾಗಿ ನಾಭಿಪ್ರದೇಶದ ಬಳಿ, ಸುತ್ತುಹಾಕಿ ಮಲಗಿರುವ ಹಾವಿನಂತೆ ಗುಪ್ತವಾಗಿ ಒಳಗೇ ಅಡಗಿರುತ್ತದೆ. ಯೋಗಿಯಾದವನು ಗುಪ್ತವಾಗಿರುವ ಈ ‘ಕುಂಡಲಿನೀ’ಶಕ್ತಿಯನ್ನು ಉದ್ದೇಶ ಪೂರ್ವಕವಾಗಿ ಮೇಲೆಬ್ಬಿಸಿ, ಅದನ್ನು ಬೆನ್ನೆಲುಬಿನ ಒಳಗೆ ಅಡಗಿರುವ ಬ್ರಹ್ಮದಂಡಿಯ ಮೂಲಕ ಮಿದುಳಿನ ಪ್ರವಹಿಸುವಂತೆ ಮಾಡುತ್ತಾನೆ. (ಈ ಮಿದುಳಿನ ಮಧ್ಯಭಾಗದಲ್ಲಿ ಸಹಸ್ರದಳಗಳಿಂದ ಕೂಡಿದ ಕಮಲವನ್ನು ಹೋಲುವ ‘ಸಹಸ್ರಾರಚಕ್ರ’ ಇದೆಯೆಂಬುದು ಯೋಗಿಗಳ ಅಭಿಪ್ರಾಯ ) ಇದಾದಮೇಲೆ ಯೋಗಿಯು ಈ ದೈವೀಚೈತನ್ಯಶಕ್ತಿಯಲ್ಲಿಯೇ ತನ್ನ ಮನಸ್ಸನ್ನು ಸ್ಥಿರಗೊಳಿಸಿ ತನ್ನಲ್ಲಿ ಹುದುಗಿರುವ ಅಹಂಭಾವವನ್ನು ಅದರೊಳಗೆ ಲೀನಗೊಳಿಸುತ್ತಾನೆ. ಹೀಗೆ ಮಾಡುವುದರ ಅವನ ಉದ್ದೇಶವು ಬಾಹ್ಯಪ್ರಾಪಂಚಿಕ ಬಂಧದಿಂದ ತಾನು ತಪ್ಪಿಸಿಕೊಂಡು, ಆ ಮೂಲಕ ಮುಕ್ತಸ್ಥಿತಿಯನ್ನು ಅನುಭವಿಸುವುದಕ್ಕಾಗಿಯೇ ಈ ಅಭಿಪ್ರಾಯಕ್ಕೆ ಆಧಾರಶ್ರುತಿಯು ಈ ಕೆಳಗಿನಂತಿವೆ.