ಮನೆ ದೇವರನಾಮ ಈ ಕಾಡಿಗೇಕೆ ನೀ ಬಂದೆ ಸ್ವಾಮಿ

ಈ ಕಾಡಿಗೇಕೆ ನೀ ಬಂದೆ ಸ್ವಾಮಿ

0

ಈ ಕಾಡಿಗೇಕೆ ನೀ ಬಂದೆ ಸ್ವಾಮಿ

ಈ ದಾರಿಯಲಿ ಹೇಗೆ ನಡೆದೆ ಸ್ವಾಮಿ

||ಈ ಕಾಡಿಗೇಕೆ||

ಈ ಕಲ್ಲು ಈ ಮುಳ್ಳು ಈ ಹಳ್ಳ

ಈ ದಿಣ್ಣೆ ಆಯಾಸ ನಾ ತಾಳೆನಲ್ಲ

||ಈ ಕಲ್ಲು||

ತಂಪಾದ ಗಾಳಿಯಲು

ಮೈ ಬೆವರುತಿದೆಯಲ್ಲ

ಅಯ್ಯಪ್ಪ ಸಾಕಾಯಿತಲ್ಲ|

ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ

||ಈ ಕಾಡಿಗೇಕೆ||

ಆನೆಗಳು ಇಲ್ಲೆಲ್ಲ ಓಡಾಡುತಿವೆಯಲ್ಲ

ದೂರದಲಿ ಹುಲಿ ಕೂಗಿತಲ್ಲ |

ಗಂಡೆದೆಯ ಗುಂಡಿಗೆಯು ಕ್ಷಣಕಾಲ ತತ್ತರಿಸಿ

ಕಣ್ಣೆಲ್ಲ ಮಂಜಾಯಿತಲ್ಲ ||

ನನ್ನ ಕಣ್ಣೆಲ್ಲ ಮಂಜಾಯಿತಲ್ಲ

||ಈ ಕಾಡಿಗೇಕೆ||

ನನ್ನಲ್ಲಿ ನಿನ್ನನ್ನು ಕಾಣುವಾಸೆಯ ತಂದು

ನೀ ಕಾಣದಾಗಿ ಎಲ್ಲಿರುವೆ |

ಕೂಗಲು ಉಸಿರಿಲ್ಲ ಅಳುವ ಶಕ್ತಿಯು ಇಲ್ಲ

ದಾರಿ ತೋರೊ ಬೇಗ ಪ್ರಭುವೆ||

ನನಗೆ ದಾರಿ ತೋರೊ ಬೇಗ ಪ್ರಭುವೆ

||ಈ ಕಾಡಿಗೇಕೆ||

ಹಿಂದಿನ ಲೇಖನಮೈಸೂರು ವಿಶ್ವವಿದ್ಯಾನಿಲಯ: ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಗೋಡೆ ಸಹಾಯದಿಂದ ಉಷ್ಟ್ರಾಸನ