ಮನೆ ರಾಜಕೀಯ ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವು: ತನಿಖೆಗೆ ಆದೇಶಿಸಿದ ಸಿಎಂ

ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವು: ತನಿಖೆಗೆ ಆದೇಶಿಸಿದ ಸಿಎಂ

0

ಬೆಂಗಳೂರು(Bengaluru): ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಮೂವರು ಸಾವನ್ನಪ್ಪಿದ ಪ್ರಕರಣವನ್ನು ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದು ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ರಾಯಚೂರು ಜಿಲ್ಲಾಧಿಕಾರಿಗೆ ಎಲ್ಲಾ ವಾರ್ಡ್‌ಗಳ ನೀರು ಸ್ಯಾಂಪಲ್ ಟೆಸ್ಟ್‌ ಮಾಡಲು ಸೂಚನೆ ನೀಡಲಾಗಿದೆ. ಅಧಿಕಾರಿಗಳ ಲೋಪದೋಷ ಇದ್ಯಾ ಎಂದು ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಮಾಡಲಾಗುವುದು. ತಾಂತ್ರಿಕ ಸಹಾಯ ಪಡೆದುಕೊಂಡು ತನಿಖೆ ನಡೆಸಲು ಸೂಚನೆ ನೀಡಲಾಗಿದ್ದು, ತಪ್ಪಿತಸ್ಥರು ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೃತರ ಕುಟುಂಬಕ್ಕೆ ಪರಿಹಾರ

ಕಲುಷಿತ ನೀರನ್ನು ಕುಡಿದು ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪಠ್ಯ ವಿವಾದದ ಕುರಿತಾಗಿ ಸಿದ್ದರಾಮಯ್ಯ ಬೇಡಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಎಲ್ಲವನ್ನೂ ರಾಜಕೀಯ ಮಾಡುತ್ತಾರೆ. ಹಲವಾರು ಬಾರಿ ಪಠ್ಯ ಪರಿಷ್ಕರಣೆ ಆಗಿದೆ. ಈ ಹಿಂದೆ ಅವರ ಕಾಲದಲ್ಲೂ ಆಗಿದೆ. ಅವಾಗ ಹಿಂದೆ ಪಠ್ಯವನ್ನು ವಾಪಸ್‌ ಪಡೆದುಕೊಂಡಿದ್ದಾರಾ? ಎಲ್ಲಿ ತಪ್ಪಾಗಿದೆ ಅದನ್ನು ಸರಿಪಡಿಸಲು ನಾವು ಸಿದ್ದರಿದ್ದೇವೆ. ತಪ್ಪು ಸರಿಪಡಿಸಿ ಮರು ಮುದ್ರಣ ಮಾಡಲು ಸರ್ಕಾರ ಸಿದ್ಧವಿದೆ ಎಂದರು.