ಮನೆ ಅಪರಾಧ ಚಾಕು ಇರಿದು ಬಾಲಕಿಯ ಹತ್ಯೆಗೈದು ಬಂಡೆಗಲ್ಲು ಎತ್ತಿ ಹಾಕಿದ ಯುವಕ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಚಾಕು ಇರಿದು ಬಾಲಕಿಯ ಹತ್ಯೆಗೈದು ಬಂಡೆಗಲ್ಲು ಎತ್ತಿ ಹಾಕಿದ ಯುವಕ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

0

ದೆಹಲಿ: ದೆಹಲಿ 16 ವರ್ಷದ ಬಾಲಕಿಯೊಬ್ಬಳನ್ನು ನಿರ್ದಯವಾಗಿ ಇರಿದ ಕೊಂದ ಬಳಿಕ ಮೃತದೇಹದ ಮೇಲೆ ಯುವಕನೊಬ್ಬ ಬಂಡೆ ಕಲ್ಲು ಎತ್ತಿ ಹಾಕಿರುವ ಘಟನೆ ಶಹಬಾದ್ ಡೇರಿ ಪ್ರದೇಶದ ರಸ್ತೆಯಲ್ಲಿ ನಡೆದಿದೆ.

Join Our Whatsapp Group

ಆರೋಪಿಯನ್ನು ಸಾಹಿಲ್ ಎಂದು ಗುರುತಿಸಲಾಗಿದ್ದು, ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ 8.45 ರ ಸುಮಾರಿಗೆ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ರಸ್ತೆಯಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ

ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ನೀಲಿ ಟೀ ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದ ಸಾಹಿಲ್, ನೆಲಕ್ಕೆ ಬಿದ್ದ ಹುಡುಗಿ ಮೇಲೆ ಅತಿ ಕ್ರೂರ ರೀತಿಯಲ್ಲಿ ಇರಿಯುತ್ತಿರುವುದನ್ನು ತೋರಿಸುತ್ತದೆ. ಅಷ್ಟಕ್ಕೆ ತೃಪ್ತನಾಗದ ಆತ ಆಕೆ ಮೇಲೆ ಬಂಡೆ ಕಲ್ಲು ಎತ್ತಿಹಾಕಿದ್ದಾನೆ. ಆಮೇಲೆ ಸ್ಥಳದಿಂದ ದೂರ ಹೋಗಿ ಮತ್ತೆ ವಾಪಸ್ ಬಂದು ಕಲ್ಲು ಎತ್ತಿ ಹಾಕುತ್ತಿರುವುದು ವಿಡಿಯೊದಲ್ಲಿದೆ,

ಈ ಭಯಾನಕ ಕೃತ್ಯವನ್ನು ಹಲವಾರು ಜನರು ನೋಡಿದ್ದರೂ ಯಾರೊಬ್ಬರೂ ಮಧ್ಯಪ್ರವೇಶಿಸಲಿಲ್ಲ. ಕೆಲವೇ ನಿಮಿಷಗಳಲ್ಲಿ ಹುಡುಗ ಹೊರಟುಹೋದ ನಂತರ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಶಹಬಾದ್ ಡೈಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಾಹಿಲ್ ನಿನ್ನೆಯಿಂದ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯಲ್ಲಿ ಅಪಘಾತ: ನಾಲ್ವರ ಸಾವು
ಮುಂದಿನ ಲೇಖನಆರ್ ಬಿಐ 2,000 ನೋಟು ಹಿಂಪಡೆಯುವುದನ್ನು ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್