ಮನೆ ರಾಜ್ಯ ಅಂತಾರಾಷ್ಟ್ರೀಯ ಯೋಗ ದಿನ: ತೃತೀಯ ಲಿಂಗಿಗಳು, ಆಶಾ ಕಾರ್ಯಕರ್ತರಿಂದ ಯೋಗಾಭ್ಯಾಸ

ಅಂತಾರಾಷ್ಟ್ರೀಯ ಯೋಗ ದಿನ: ತೃತೀಯ ಲಿಂಗಿಗಳು, ಆಶಾ ಕಾರ್ಯಕರ್ತರಿಂದ ಯೋಗಾಭ್ಯಾಸ

0

ಮೈಸೂರು(Mysuru): ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಭರದಿಂದ ಸಿದ್ದತೆಗಳು ನಡೆದಿದೆ.

ಮಾನವೀಯತೆಗಾಗಿ ಯೋಗ’ ಎಂಬ ಶೀರ್ಶೆಕೆಯಡಿಯಲ್ಲಿ 2022ರ ಅಂತಾರಾಷ್ಟ್ರೀಯ ಯೋಗ ದಿನ ನಡೆಯಲಿದ್ದು,  ಸಮಾಜದ ಎಲ್ಲಾ ವರ್ಗದವರೂ ಸಹ ಇದರಲ್ಲಿ ಭಾಗವಹಿಸಬೇಕು ಎಂಬುದು ಇಚ್ಚೆಯಾಗಿದೆ.

ಅದರಂತೆಯೇ ಇಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ಭವನದಲ್ಲಿ ಇಂದಿನಿಂದ ಯೋಗಾ ಫೆಡರೇಷನ್ ವತಿಯಿಂದ ತೃತೀಯ ಲಿಂಗಿಗಳು, ಆಶಾ ಕಾರ್ಯಕರ್ತರಿಗೆ, ವಿಶೇಷ ಚೇತನರಿಗೆ ಯೋಗ ತರಬೇತಿ ನೀಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ತರಬೇತಿ ನೀಡುವ ಕಾರ್ಯಕ್ರಮ ನಡೆಯಿತು.

ಈ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್ ,ಯೋಗ ಫೆಡರೇಷನ್ ನ ಗಣೇಶ್, ಮೈಸೂರು ಜಿಲ್ಲೆ ಡ್ಯಾಪ್ಕೋ ಅಧಿಕಾರಿಗಳಾದ ಡಾ. ಸಿರಾಜ್, ಜಿಲ್ಲಾ ವೈಧ್ಯಾಧಿಕಾರಿ ಡಾ. ಪ್ರಸಾದ್ ಸೇರಿದಂತೆ ಮುಂತದವರು ಉಪಸ್ಥಿತರಿದ್ದರು.