ಮನೆ ಸಾಹಿತ್ಯ ಸಿಲ್ಲಿ ಕಾಂಪ್ಲೆಕ್ಸ್

ಸಿಲ್ಲಿ ಕಾಂಪ್ಲೆಕ್ಸ್

0

     ಹುಡುಗರು ಕೆಲವು ಸಂದರ್ಭಗಳಲ್ಲಿ ಹುಡುಗಿಯರ ಹಾಗೆ ಮೇಕಪ್ ಮಾಡಿಕೊಳ್ಳುವುದು. ಸೀರೆ ಉಟ್ಟುಕೊಂಡು ಹಣೆಗೆ ತಿಲಕವನ್ನಿಟ್ಟುಕೊಂಡು ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಂಡು ಸಂಭ್ರಮ ಪಟ್ಟುಕೊಳ್ಳುತ್ತಿರುತ್ತಾರೆ ಒಂದೆರಡು ಬಾರಿ ಮಾಡಿದರೆ ತಮಾಷೆಗಾಗಿ ಎಂದುಕೊಳ್ಳಬಹುದು.

Join Our Whatsapp Group

      ಆದರೆ,ಅವರು ಯಾವಾಗಲೂ ಈ ರೀತಿಯಾಗಿರಲು ಇಷ್ಟಪಡುವುದೊಳ್ಳೆಯದಲ್ಲ.ಅವರು ತಮ್ಮ ಸ್ನೇಹಿತರೊಂದಿಗೆ ಬೆರೆಯಲು ಇಷ್ಟಪಡದೆ, ಹುಡುಗಿಯರೊಂದಿಗೆ ಜಾಲಿಯಾಗಿರಲಿ ಇಷ್ಟಪಡುತ್ತಾರೆ.

    ಕಣ್ಣುಗಳಿಗೆ ಕಾಡಿಗೆ, ಉಗುರುಗಳಿಗೆ ನೈಲ್ ಪಾಲೀಷ್ ಮತ್ತು ಕೈಗಳಿಗೆ ಮೆಹಂದಿ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ.ಬಣ್ಣ ಬಣ್ಣದ ಹೂಗಳಿರುವ ಶರ್ಟ್ ಗಳನ್ನು ಧರಿಸುತ್ತಾರೆ. ಮೀಸೆ ಬೆಳೆಯುತ್ತಿದ್ದರೂ ಅದನ್ನು ಹಾಗಾಗ್ಗೆ ತೆಗೆದುಬಿಡುತ್ತಾರೆ.ಇಂತಹ ಹುಡುಗರೊಂದಿಗೆ ತಂದೆಯಾದರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು.ಅಗತ್ಯ ಬಿದ್ದರೆ ಕೌನ್ಸಿಲರ್ ಕಡೆಯಿಂದ ಸಲಹೆಗಳನ್ನು ಹೇಳಿಸಬೇಕು.ಕೇಳದಿದ್ದರೆ ಹಾಸ್ಟೆಲ್ ಗಳಲ್ಲಿ ಸೇರಿಸಿದರೂ ಸಾಕು, ಬೇರೆ ಮಕ್ಕಳನ್ನು ನೋಡಿ ಬದಲಾಗುತ್ತಾರೆ.

 ಟಾಮ್ ಬಾಯ್ ಕಾಂಪ್ಲೆಕ್ಸ್ :-

      ಹುಡುಗಿಯರು ಹೆಚ್ಚಾಗಿ ಹುಡುಗರ ಹಾಗೆ ವರ್ತಿಸುವುದನ್ನು ಟಾಮ್ ಬಾಯ್ ಕಾಂಪ್ಲೆಕ್ಸ್ ಎನ್ನುತ್ತಾರೆ.ಗಂಡಸರ ಉಡುಪುಗಳನ್ನು ಧರಿಸುವುದು ಗಂಡಸರ ಹಾಗೆ ನಡೆಯುವುದು,ಕಣ್ಣುಗಳಲ್ಲಿ ದರ್ಪ ತೋರಿಸುತ್ತಾ ಮಾತನಾಡುವುದು ಹಾಗೂ ಲಂಗ,ದಾವಣಿ, ಸೀರೆ,ಡ್ರೆಸ್ ಮುಂತಾದ ಸ್ತ್ರೀ ಉಡುಪುಗಳನ್ನು  ಇಷ್ಟಪಡುತ್ತಿರುತ್ತಾರೆ.

      ಇವರಿಗೆ ಹುಡುಗಿಯರಿಗಿಂತ ಹುಡುಗರ ಸ್ನೇಹವೆಂದರೆ ಇಷ್ಟ ಅಲ್ಲಿ ಅವರೊಂದಿಗೆ ಡಾಮಿನೇಟ್ ಆಗಿ ಲೋ… ಏನೋ…ಬಾರೋ ಎನ್ನುತ್ತಾ ಓಡಾಡುತ್ತಿರುತ್ತಾರೆ.ತಾವು ಹೆಣ್ಣಾಗಿ ಹುಟ್ಟಿದ್ದಕ್ಕಾಗಿ ತುಂಬಾ ವ್ಯಥೆ ಪಡುತ್ತಿರುತ್ತಾರೆ. ಕಾಲೇಜು,ಹಾಸ್ಟೆಲ್ ಳಲ್ಲಿ ಅಧಿಕಾರ ದರ್ಪದಿಂದ ವ್ಯವಹರಿಸಿತ್ತಾರೆ. ಇದರಿಂದಾಗಿ ಉಳಿದ ಹೆಣ್ಣು ಮಕ್ಕಳಿಗೆ ಧೈರ್ಯ ಉಂಟಾಗುತ್ತದೆ. ಇದನ್ನು ತಾಯಿ ತಂದೆಯರು ಗಮನಿಸಿ ಅವರಿಗೆ ಬಿಹೇವಿಯರ್ ಮೋಡಿಫಿಕೇಶನ್ ಮಾಡಿಸಬೇಕು.ಇಲ್ಲದಿದ್ದರೆ ಇಂತಹವರಲ್ಲಿ ಕೆಲವರು ಸಲಿಂಗಕಾಮಿಗಳಾಗಿ ಬದಲಾಗಿ, ಅದರಲ್ಲಿ ಪುರುಷ ಪುರುಷ ಪಾತ್ರ ವಹಿಸುವ ಅವಕಾಶವಿದೆ. ಇಂತಹವರನ್ನು ಹಾಸ್ಟೆಲ್ ಗಳಲ್ಲಿ ಇಡುವುದು  ಒಳ್ಳೆಯದಲ್ಲ.

 ಈಡಿಪಸ್ ಕಾಂಪ್ಲೆಕ್ಸ್ :

      ತಾಯಿಯನ್ನು ಅತಿಯಾಗಿ ಪ್ರೀತಿಸಿ,ತಾಯಿಯನ್ನೇ ಸರ್ವಸ್ವ ಎಂದುಕೊಳ್ಳುವ ಹುಡುಗರನ್ನು ಸೈಕಾಲಜಿಸ್ಟ್ ಗಳು ಈ ಕಾಂಪ್ಲೆಕ್ಸ್ ಪೀಡಿತರೆಂದು ಬಣ್ಣಿಸುತ್ತಾರೆ.ಒಂದು  ಗ್ರೀಕ್ ಕಥೆಯಲ್ಲಿ ಈಡಿಪಸ್ ಎಂಬ ಹುಡುಗನೊಬ್ಬ ಬಂದು ಅಯೋಮಯ ಪರಿಸ್ಥಿತಿಯಲ್ಲಿ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾ ನೆಂಬ ಕಥೆಯಿದೆ.ಅದು ಕೇವಲ ಕಥೆ ಮಾತ್ರ.ಆ ರೀತಿಯಾಗಿ ಯಾರು ಮಾಡಲಾರರು. ಈ ಕಾಂಪ್ಲೆಕ್ಸ್ ಗೊಳಗಾದ ಹುಡುಗರು ಅಮ್ಮನನ್ನು ಆರಾಧಿಸುತ್ತಾ ತಾಯಿಯನ್ನು ವಿಮರ್ಶಿಸಿದ ತಂದೆಯನ್ನು ದ್ವೇಷಿಸುವ ಸಂದರ್ಭಗಳಿವೆ.

      ಇಂತಹ ಪರಿಸ್ಥಿತಿಯನ್ನು ಗಮನಿಸಿದಾಗ, ತಾಯಿಯಾದವಳು ತನ್ನ ಗಂಡನ ಕುರಿತಂತೆ ಬಹಳ ಮಹತ್ತರವಾಗಿ ಹೇಳಿ,ತಂದೆಯನ್ನು ಗೌರವಿಸೆಂದು “ಅವರೇ ಇಲ್ಲದಿದ್ದರೆ ನಾವಿಲ್ಲ ”ಎಂಬ ಪಾಸಿಟಿವ್ ಸಲಹೆಗಳನ್ನು ನೀಡಬೇಕು., ಮೀಸೆ ಮೊಳೆತ ಮಕ್ಕಳನ್ನು ಸ್ನೇಹಿತರ ಹಾಗೆ ನೋಡಿವುದೊಳ್ಳೆಯದು.

 ಎಲೆಕ್ಟ್ರಾ ಕಾಂಪ್ಲೆಕ್ಸ್ 

        ಅಪ್ಪನನ್ನು ಹೀರೋ ಆಗಿ, ಹೀಮ್ಯಾನ್ ಆಗಿ, ರಾಬೀನ್ ಹುಡ್ ನಂತೆ ಆರಾಧಿಸುವ ಹುಡುಗಿಯರಿಗೆ  ಬರುವ ಕಾಂಪ್ಲೆಕ್ಸ್  ಇದು. ಇದುಕೂಡಾ ಗ್ರೀಕ್ ಕಥೆಯ ಆಧಾರವಾಗಿ ಬಂದಂತಹ ಹೆಸರೇ. ಈಕಾಂಪ್ಲೆಕ್ಸ್ ಗೊಳಗಾದ ಹುಡುಗಿಯರು, ತಂದೆಯನ್ನು ಮಹಾನ್ ವೀರನಾಗಿ ನೋಡುವುದರಲ್ಲಿ ತಪ್ಪೇನಿಲ್ಲವಾದರೂ, ತಾಯಿಯನ್ನು ವಿಲನ್ ನಳಂತೆ ಭಾವಿಸುತ್ತಾರೆ. ತಾಯಿ ಮಾತಿಗೆ ಬೆಲೆ ಕೊಡಲಾರರು. ತಂದೆಗೆ ಸೂಕ್ತ ಬೆಲೆ ಮೌಲ್ಯವನ್ನು ನೀಡುವುದಲ್ಲವೆಂದು ವ್ಯಥೆಪಡುತ್ತಿರುತ್ತಾರೆ.ತಂದೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿ ಕೊಟ್ಟು ಆಸರೆಯಾಗಿ ನಿಲ್ಲಬೇಕೆಂದುಕೊಳ್ಳುತ್ತಾರೆ. ಆದರೆ ಮದುವೆಯಾದ ನಂತರ ಸಹಜವಾಗಿಯೇ ಆರಾಧನೆ ಕಡಿಮೆಯಾಗುತ್ತದೆ.ಇಂತಹ ಸಮಯದಲ್ಲಿ ತಂದಿಯಾದವರು  ಮಧ್ಯ ಪ್ರವೇಶಿಸಿ ತಾಯಿಯ ಪ್ರೀತಿ,ವಾತ್ಸಲೆಗಳು ಅದೆಷ್ಟು ಮಹತ್ತರವಾದುದೆಂದು  ಹೇಳಬೇಕು ಪರಮಾತ್ಮನು ಪ್ರತಿ ಜಾಗ ಸ್ಥಳಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ತನ್ನ ಪರವಾಗಿ ಅಮ್ಮಂದಿರನ್ನು ಸೃಷ್ಟಿಸಿದ್ದಾನೆಂದು ಹೇಳಿ, ತಾಯಿಯನ್ನು ಪ್ರೀತಿಸುವ ಹಾಗೆ ಪ್ರೇರೇಪಣೆಯನ್ನುಂಟು ಮಾಡಬೇಕು.