ಮನೆ ರಾಜಕೀಯ ಕಾಂಗ್ರೆಸ್ ಗೆ ಹೊಣೆಗಾರಿಕೆ ಮರೆತು ಹೋಗಿದೆ: ಆರಗ ಜ್ಞಾನೇಂದ್ರ

ಕಾಂಗ್ರೆಸ್ ಗೆ ಹೊಣೆಗಾರಿಕೆ ಮರೆತು ಹೋಗಿದೆ: ಆರಗ ಜ್ಞಾನೇಂದ್ರ

0

ಚಿತ್ರದುರ್ಗ(Chitrdurga): ಕಾಂಗ್ರೆಸ್ ಇಷ್ಟು ದಿನ ಆಡಳಿತ ನಡೆಸಿದ್ದರೂ ಅವರಿಗೆ ಹೊಣೆಗಾರಿಕೆ ಮರೆತು ಹೋಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಕಾಂಗ್ರೆಸ್ ನ ಲಂಗೋಟಿಯನ್ನು ಬಿಚ್ಚಿ‌ ಕಳುಹಿಸಲಿದ್ದಾರೆ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸಗಳಿಲ್ಲ, ಮನಸೋ ಇಚ್ಛೆ ಮಾತಾಡುತ್ತಿದ್ದಾರೆ. ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೋ ದುರ್ಬಳಕೆ ಮಾಡಿಕೊಂಡು ಸರ್ಕಾರ ನಡೆಸುವ ದರಿದ್ರತನ ನಮಗೆ ಇಲ್ಲ. ಸರ್ಕಾರ ನೀತಿ ನಿಯಮದ ಪ್ರಕಾರ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.

ಕಾಂಗ್ರೆಸ್, ಜೆಡಿಎಸ್​ನವರು ಯಾವಾಗ ಜೊತೆಯಾಗುತ್ತಾರೆ, ಯಾವಾಗ ಬೇರೆ ಆಗುತ್ತಾರೋ‌ ಗೊತ್ತಿಲ್ಲ. ಅವರು ಆಫರ್ ಕೊಟ್ಟರೆ ಇವರು ತಿರಸ್ಕಾರ ಮಾಡೋದು, ಸ್ವೀಕಾರ ಮಾಡುವುದು ಅವರಿಬ್ಬರಿಗೆ ಬಿಟ್ಟ ವಿಚಾರ. ಇವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಗಾಗಿ ಬಿಎಸ್​ವೈ ಆಡಳಿತದಲ್ಲಿ ಸಾಲ ಆಗಿರಬಹುದು. ಆದರೆ, ಈಗಿನ ಸರ್ಕಾರ ಸಾಲ ತೀರಿಸುತ್ತದೆ. ರಾಜ್ಯದ ಏಳಿಗೆಗೆ ಏನು ಮಾಡಬೇಕೋ ಅದನ್ನು ಬಿಎಸ್​ವೈ ಮಾಡಿದ್ದಾರೆ. ಈ ರೀತಿ ಲಘುವಾಗಿ ಯಾರನ್ನು ಟೀಕಿಸಬಾರದು. ಯಾಕೆ ಸಿದ್ದರಾಮಯ್ಯ ಕಾಲದಲ್ಲಿ ಸಾಲ ಮಾಡಿಲ್ಲವೇ?, ದೇವಲೋಕವನ್ನೇ ಇಳಿಸಿದಂತೆ ಸಿದ್ದರಾಮಯ್ಯ ಮಾತನಾಡ್ತಾರೆ. ಸಿದ್ದರಾಮಯ್ಯ ಆಡಳಿತದಲ್ಲೂ ಗುತ್ತಿಗೆದಾರರಿಗೆ ಬಿಲ್ ಕೊಡದೇ ಸತಾಯಿಸಿದ್ದನ್ನು ಜನ ಮರೆತಿಲ್ಲ ಎಂದರು.