ಮನೆ ಅಪರಾಧ ಮೈಸೂರು: ತೋಟದ ಮನೆಯಲ್ಲಿ ವೃದ್ಧ ದಂಪತಿ ಕೊಲೆ

ಮೈಸೂರು: ತೋಟದ ಮನೆಯಲ್ಲಿ ವೃದ್ಧ ದಂಪತಿ ಕೊಲೆ

0

ಮೈಸೂರು: ತೋಟದ ಮನೆಯಲ್ಲಿ ಹಾಡಹಗಲೇ ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯನ್ನು ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯಲ್ಲಿ ಸೋಮವಾರ ನಡೆದಿದೆ.

Join Our Whatsapp Group

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಹಾಗು ಇವರ ಪತ್ನಿ ಶಾಂತಮ್ಮ (52) ಕೊಲೆಯಾದವರು.

ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಮಗಳಿದ್ದಾರೆ. ಓರ್ವ ಮಗ ದೇವರಾಜ್ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ.

ಸೋಮವಾರ ಸಂಜೆ ದೇವರಾಜ್ ಜಮೀನಿನಲ್ಲಿ ಶುಂಠಿ ಕೀಳುತ್ತಿದ್ದರು. ಶುಂಠಿ ತುಂಬಲು ಕುಕ್ಕೆ ತರುವಂತೆ ಕಾರ್ಮಿಕ ಗಣೇಶನನ್ನು ತಂದೆಯ ತೋಟದ ಮನೆಗೆ ಕಳುಹಿಸಿದ್ದರು. ಆ ವೇಳೆ ವೇಳೆ ಮನೆಯೊಳಗೆ ಶಾಂತಮ್ಮ ಹಾಗೂ ದನದ ಕೊಟ್ಟಿಗೆಯಲ್ಲಿ ರಂಗಸ್ವಾಮಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ದೇವರಾಜ್​ಗೆ ಕಾರ್ಮಿಕ ಮಾಹಿತಿ ನೀಡಿದ್ದರು.

ದೇವರಾಜ್ ಮನೆಗೆ ಬಂದು ನೋಡುವಷ್ಟರಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ತಕ್ಷಣವೇ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್​ಪಿ ವಿಷ್ಣುವರ್ಧನ್, ಪೊಲೀಸ್ ಇನ್ಸ್‌ಪೆಕ್ಟರ್ ಲೋಲಾಕ್ಷಿ, ಡಿವೈಎಸ್​​ಪಿ ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತೋಟದ ಮನೆಯಲ್ಲಿ ವಾಸವಿರುವ ರಂಗಸ್ವಾಮಿಗೌಡ ಮತ್ತವರ ಪತ್ನಿಯನ್ನು ಯಾರು ಮತ್ತು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಬಿಳಿಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ತೋಟದ ಮನೆಯ ಬಳಿ ಜಮಾಯಿಸಿದರು.