ಮನೆ ಅಪರಾಧ ವಿವಾಹಿತೆ ಜೊತೆ ಅಕ್ರಮ ಸಂಬಂಧ: ಯುವಕನ ಕುಟುಂಬದವರ ಮೇಲೆ ಹಲ್ಲೆ

ವಿವಾಹಿತೆ ಜೊತೆ ಅಕ್ರಮ ಸಂಬಂಧ: ಯುವಕನ ಕುಟುಂಬದವರ ಮೇಲೆ ಹಲ್ಲೆ

0

ಮೈಸೂರು: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನ ಕುಟುಂಬವನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಹೆಚ್. ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.

ಹೆಚ್. ಡಿ ಕೋಟೆ ತಾಲೂಕು ಜೊಂಪನಹಳ್ಳಿ ಗ್ರಾಮದ ಶಿವಪ್ಪ (45), ಜ್ಯೋತಿ (40) ಹಾಗೂ ಶರತ್ (20) ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವಕನ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಲೋಹಿತ್ ಹಾಗೂ ಪರಶಿವಮೂರ್ತಿ ಎಂಬುವರು ಪರಾರಿಯಾಗಿದ್ದಾರೆ.

ಏನಿದು ಘಟನೆ ?:  ಜೊಂಪನಹಳ್ಳಿಯ ವಿವಾಹಿತ ಮಹಿಳೆಯ ಜೊತೆ ಶರತ್ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದ್ದು, ಈ ವಿಚಾರದಲ್ಲಿ ಮಹಿಳೆ ಕಡೆಯವರಾದ ಲೋಹಿತ್ ಹಾಗೂ ಪರಶಿವಮೂರ್ತಿ  ಒಂದೆರಡು ಬಾರಿ ಗಲಾಟೆ ನಡೆಸಿದ್ದರು ಎಂದು ತಿಳಿದುಬಂದಿದ್ದು,  ಪಂಚಾಯಿತಿ ನಡೆಸಿ ಮಹಿಳೆ ಹಾಗೂ ಶರತ್ ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರೆದಿತ್ತು. ಮಹಿಳೆ ಸಹವಾಸಕ್ಕೆ ಬರದಂತೆ ಶರತ್​ಗೆ ಮಹಿಳೆಯ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಭಾನುವಾರ ನ್ಯಾಯಪಂಚಾಯ್ತಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕಾರಣಾಂತರದಿಂದ ನ್ಯಾಯಪಂಚಾಯ್ತಿ ಮುಂದೂಡಲಾಗಿತ್ತು. ಪರಿಚಯಸ್ಥರೊಬ್ಬರ  ಸಾವನ್ನಪ್ಪಿದ ಕಾರಣ ಅಂತಿಮ ದರ್ಶನಕ್ಕೆ ಶರತ್, ತಂದೆ ಶಿವಪ್ಪ ಹಾಗೂ ತಾಯಿ ಜ್ಯೋತಿ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದವರನ್ನು ಅಡ್ಡ ಹಾಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಮೂವರು ರಸ್ತೆಯಲ್ಲಿ ಕೂಗಾಡುತ್ತಿರುವುದನ್ನು ಕೇಳಿಸಿಕೊಂಡು ಗ್ರಾಮಸ್ಥರು ಬರುತ್ತಿದ್ದಂತೆ, ಲೋಹಿತ್ ಹಾಗೂ ಪರಶಿವಮೂರ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಗಾಯಾಳುಗಳನ್ನು ಹೆಚ್. ಡಿ ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಶರತ್ ಹಾಗೂ ಶಿವಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಶರತ್​ನ ತಾಯಿ ಜ್ಯೋತಿ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ.

ಹೆಚ್. ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನನನ್ನ ಮುಂದೆ ಮೂರು ಆಯ್ಕೆಗಳಿವೆ: ಸಿಎಂ ಇಬ್ರಾಹಿಂ
ಮುಂದಿನ ಲೇಖನಬಜೆಟ್ ಅಧಿವೇಶನ: ಮೋದಿ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ