ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದಲ್ಲಿ ಇಂದಿನ (ಜೂನ್‌ 12) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದ್ದು, ಮಳೆ ಆಗಮನವಾಗುವ ಸಾಧ್ಯತೆ ಇದೆ. ಕಲ್ಬುರ್ಗಿಯಲ್ಲಿ ಅತ್ಯಧಿಕ 33 ಡಿಗ್ರಿ ಸೆಲ್ಸಿಯಸ್‌ ಹೊಂದಿದೆ.

ಬಳ್ಳಾರಿ 33-24 ಸೆಲ್ಸಿಯಸ್‌, ಹಾಸನ 26-19 ಸೆಲ್ಸಿಯಸ್‌, ರಾಯಚೂರು 34-24 ಸೆಲ್ಸಿಯಸ್‌, ವಿಜಯನಗರ 31-24 ಸೆಲ್ಸಿಯಸ್‌, ಯಾದಗಿರಿ 33-24 ಸೆಲ್ಸಿಯಸ್‌ ಬಿಸಿಲು, ಮೋಡ ಕವಿದ ವಾತಾವರಣ, ಬೀದರ್‌ 32-23 ಸೆಲ್ಸಿಯಸ್‌ ಮೋಡ ಕವಿದ ವಾತಾವರಣವಿರಲಿದೆ.

ವಿಜಯಪುರದಲ್ಲಿ 31-24 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.10 ರಷ್ಟು, ಚಿತ್ರದುರ್ಗ 29-21 ಸೆಲ್ಸಿಯಸ್‌ ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ದಾವಣಗೆರೆ 29-22 ಸೆಲ್ಸಿಯಸ್‌, ಧಾರವಾಡ 27-21 ಸೆಲ್ಸಿಯಸ್, ಗದಗ 29-22 ಸೆಲ್ಸಿಯಸ್‌, ಹಾವೇರಿ 29-22 ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40 ರಷ್ಟು ಮಳೆಯಾಗುವ ಸಾಧ್ಯತೆ ಇದೆ.

ಬಾಗಲಕೋಟೆ 31-23 ಸೆಲ್ಸಿಯಸ್‌, ಬೆಂಗಳೂರು ನಗರ 29-20 ಸೆಲ್ಸಿಯಸ್‌, ಬೆಳಗಾವಿ 27-24 ಸೆಲ್ಸಿಯಸ್‌, ಚಿಕ್ಕಮಗಳೂರು 26-18 ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50 ರಷ್ಟು, ಚಿಕ್ಕಬಳ್ಳಾಪುರ 29-21 ಸೆಲ್ಸಿಯಸ್‌, ಕಲ್ಬುರ್ಗಿ 33-24 ಸೆಲ್ಸಿಯಸ್‌, ಕೋಲಾರ 31-22 ಸೆಲ್ಸಿಯಸ್‌, ಕೊಪ್ಪಳ 31-23 ಸೆಲ್ಸಿಯಸ್‌, ಮಂಡ್ಯ 29-21 ಸೆಲ್ಸಿಯಸ್‌, ಶಿವಮೊಗ್ಗ 28-22 ಸೆಲ್ಸಿಯಸ್‌, ತುಮಕೂರು 28-21 ಸೆಲ್ಸಿಯಸ್‌ ಇದ್ದು ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50 ರಷ್ಟಿದೆ.

ರಾಮನಗರ 29-21 ಸೆಲ್ಸಿಯಸ್‌ ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಂಗಳೂರು ಗ್ರಾಮಾಂತರ 29-20 ಸೆಲ್ಸಿಯಸ್‌ ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಮೈಸೂರು 28-21 ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಚಾಮರಾಜನಗರ 29-21 ಸೆಲ್ಸಿಯಸ್‌ ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ದಕ್ಷಿಣ ಕನ್ನಡ 28-24 ಸೆಲ್ಸಿಯಸ್‌, ಕೊಡಗು 22-17 ಸೆಲ್ಸಿಯಸ್‌ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟಿದೆ ಎಂದು ವರದಿ ತಿಳಿಸಿದೆ.