ಬೆಂಗಳೂರು: ನಗರದಲ್ಲಿ ಕೊರೊನಾ ವೈರಸ್ ಮತ್ತೆ ತಲೆ ಎತ್ತಿದ್ದು, ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಡಿಜೆಹಳ್ಳಿ, ಸಿವಿರಾಮನ್ ನಗರ ಮತ್ತು ಜೈ ಭುವನೇಶ್ವರಿ ನಗರ ಎಂಬ ಮೂರು ಬೇರೆ ಬೇರೆ ಪ್ರದೇಶಗಳಲ್ಲಿ ಇತ್ತೀಚಿಗೆ ಈ ಸೋಂಕು ದೃಢಪಟ್ಟಿದೆ.
ಹೊಸ ಪ್ರಕರಣಗಳ ವಿವರ:
- ಸೋಂಕಿತರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಸೇರಿದ್ದಾರೆ
- ಮೂವರಿಗೂ ಯಾವುದೇ ಪ್ರವಾಸ ಇತಿಹಾಸ (ಟ್ರಾವೆಲ್ ಹಿಸ್ಟರಿ) ಇಲ್ಲ
- ಸದ್ಯ ಅವರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಈಗಾಗಲೇ ಮಲ್ಲೇಶ್ವರಂನ 45 ವರ್ಷದ ವ್ಯಕ್ತಿ, ರಾಜಾಜಿನಗರದ 38 ವರ್ಷದ ವ್ಯಕ್ತಿ — ಇಬ್ಬರೂ ಕೂಡ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 17ರಂದು ವೈಟ್‌ಫೀಲ್ಡ್‌ನ 84 ವರ್ಷದ ವೃದ್ಧೆ ಕೋವಿಡ್‌ಗೆ ಬಲಿಯಾಗಿದ್ದಾರೆ
ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿದಂತೆ ಮೂರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ
ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ರಾಜ್ಯದಲ್ಲಿವೆ.














