ಮನೆ ರಾಜ್ಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದರೆ ₹1,000 ದಂಡ: ಹೊಸ ಕಾಯ್ದೆ ಜಾರಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು/ಗುಟ್ಕಾ ಉಗುಳಿದರೆ ₹1,000 ದಂಡ: ಹೊಸ ಕಾಯ್ದೆ ಜಾರಿ

0

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸದಾಗಿ ಜಾರಿಗೊಳಿಸಲಾದ ತಂಬಾಕು ನಿಯಂತ್ರಣ ಕಾಯ್ದೆಯ ಪ್ರಕಾರ, ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಅಥವಾ ಗುಟ್ಕಾ ಉಗುಳಿದರೆ ₹1,000 ದಂಡ ವಿಧಿಸಲಾಗುವುದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಈಗಾಗಲೇ ಗ್ಯಾಜೆಟ್ ಆದೇಶ ಹೊರಡಿಸಿದೆ.

ಹೊಸ ನಿಯಮದ ಮುಖ್ಯ ಅಂಶಗಳು:

  • ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಅಥವಾ ಗುಟ್ಕಾ ಸೇವನೆ ಮತ್ತು ಉಗುಳುವಿಕೆ ಸಂಪೂರ್ಣ ನಿಷಿದ್ಧ.
  • ನಿಯಮ ಉಲ್ಲಂಘಿಸಿದರೆ ₹1,000 ದಂಡ ವಿಧಿಸಲಾಗುವುದು.
  • 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ.
  • ಕಾನೂನು ಉಲ್ಲಂಘಿಸಿದರೆ ಮಾರಾಟಗಾರರಿಗೆ ಕೂಡ ₹1,000 ದಂಡ ವಿಧಿಸಲಾಗುವುದು.
  • ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವನೆ ನಿಷಿದ್ಧ. ಈ ನಿಯಮ ಉಲ್ಲಂಘಿಸಿದರೆ: ₹50,000–₹1 ಲಕ್ಷ ದಂಡ, 1 ರಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ

“ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಹಾಗೂ ವ್ಯಾಪಾರ ಮತ್ತು ವಿತರಣೆಯ ತಿದ್ದುಪಡಿ ಮಸೂದೆ 2024″ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 23ರಂದು ಅಂಗೀಕಾರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಗೊಂಡಿದೆ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಕ್ರಮ ಕೈಗೊಳ್ಳಲಾಗಿದೆ.