ಮನೆ ರಾಜ್ಯ ಇಂದಿನಿಂದ ಬಿಎಂಟಿಸಿಯಿಂದ ‘ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ: ಬೆಂಗಳೂರಿಗರಿಂದ ಭರ್ಜರಿ ಪ್ರತಿಕ್ರಿಯೆ

ಇಂದಿನಿಂದ ಬಿಎಂಟಿಸಿಯಿಂದ ‘ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ: ಬೆಂಗಳೂರಿಗರಿಂದ ಭರ್ಜರಿ ಪ್ರತಿಕ್ರಿಯೆ

0

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಪ್ರಸಿದ್ಧ ದೇವಾಲಯಗಳಿಗೆ ವಿಶೇಷ ಪ್ರವಾಸ ಸೌಲಭ್ಯ ನೀಡುವ ‘ದಿವ್ಯ ದರ್ಶನ’ ಟೂರ್ ಪ್ಯಾಕೇಜ್‌ಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದೆ. ಈ ಪ್ಯಾಕೇಜ್‌ಗೆ ಮೊದಲ ದಿನವೇ ಬೆಂಗಳೂರಿಗರಿಂದ ಭರ್ಜರಿ ಸ್ಪಂದನೆ ದೊರೆತಿದ್ದು, 200ಕ್ಕೂ ಹೆಚ್ಚು ಜನರು ಈ ಧಾರ್ಮಿಕ ಪ್ರವಾಸದಲ್ಲಿಗೆ ಪಾದಾರ್ಪಣೆ ಮಾಡಿದ್ದಾರೆ.

ಶನಿವಾರ ಬೆಳಗ್ಗೆ 8:30ಕ್ಕೆ ಮೆಜೆಸ್ಟಿಕ್ ಬಿಎಂಟಿಸಿ ಟರ್ಮಿನಲ್‌ನಿಂದ 3 ಎಸಿ ಬಸ್‌ಗಳಲ್ಲಿ ಪ್ರಾರಂಭವಾದ ಈ ಪ್ರವಾಸ, ನಾಡಿನ ವಿವಿಧ ಪ್ರಸಿದ್ಧ ದೇವಾಲಯಗಳ ದರ್ಶನ ನೀಡುವ ಮೂಲಕ ಧಾರ್ಮಿಕ ಪ್ರವಾಸಿಗರಿಗೆ ನಿಜವಾದ ಆಧ್ಯಾತ್ಮ ಅನುಭವವನ್ನ ನೀಡುತ್ತಿದೆ.

ದರ್ಶನಕ್ಕೆ ಲಭ್ಯವಿರುವ ಪ್ರಮುಖ ದೇವಸ್ಥಾನಗಳು:

  • ಗಾಳಿ ಆಂಜನೇಯ ಸ್ವಾಮಿ ದೇವಾಲಯ
  • ರಾಜರಾಜೇಶ್ವರಿ ದೇವಸ್ಥಾನ
  • ಶೃಂಗಗಿರಿ ಷಣ್ಮುಖ ದೇವಸ್ಥಾನ
  • ಕುರುಮಾರಿ ಅಮ್ಮ ದೇವಾಲಯ
  • ಓಂಕಾರ ಹೀಲ್ಸ್
  • ಇಸ್ಕಾನ್ ವೈಕುಂಠ ದೇವಾಲಯ
  • ಆರ್ಟ್ ಆಫ್ ಲಿವಿಂಗ್ ಅಶ್ರಮ
  • ಬನಶಂಕರಿ ದೇವಸ್ಥಾನ

ಟಿಕೆಟ್ ದರ ಮತ್ತು ಸೇವೆಯ ವಿವರ:

  • ವಯಸ್ಕರಿಗೆ: ₹450
  • ಮಕ್ಕಳಿಗೆ: ₹350
    ಈ ಪ್ಯಾಕೇಜ್‌ ಪ್ರವಾಸ ಪ್ರತೀ ವಾರಾಂತ್ಯ (ಶನಿವಾರ, ಭಾನುವಾರ) ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಮಾತ್ರ ಲಭ್ಯವಿರುತ್ತದೆ.
    ಬಸ್‌ಗಳಲ್ಲಿ ಎಸಿ ಸೌಲಭ್ಯವಿದ್ದು, ದೇವಾಲಯದ ನೇರ ದರ್ಶನ ಹಾಗೂ ನಿರಂತರ ಮಾರ್ಗದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.