ಮನೆ ಅಪರಾಧ ಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ ಆರೋಪ: ಇಓ ಅಮಾನತು

ಪರ್ಸಂಟೇಜ್ ಗಾಗಿ ಪಿಡಿಓಗಳಿಗೆ ಕಿರುಕುಳ ಆರೋಪ: ಇಓ ಅಮಾನತು

0

ಮಂಡ್ಯ: ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶ್ರೀರಂಗಪಟ್ಟಣದ ಇಒ ಭೈರಪ್ಪರ ವಿರುದ್ಧ ಜಿಲ್ಲಾ ಪಂಚಾಯತ್ ಸಿಇಓಗೆ ದೂರು ನೀಡಿದ ಬೆನ್ನಲ್ಲೇ ಇಓ ಭೈರಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ಪರ್ಸೆಂಟೇಜ್ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಶೇಕಡಾ 30ರಷ್ಟು ಪರ್ಸೆಂಟೇಜ್ ಕೇಳುತ್ತಾರೆಂದು ಶ್ರೀರಂಗಪಟ್ಟಣ ತಾಲೂಕಿನ ಪಿಡಿಒಗಳು ಪಿಡಿಒಗಳು ಜಿ.ಪಂ. ಸಿಇಒಗೆ ದೂರು ಸಲ್ಲಿಸಲಾಗಿತ್ತು.

ಇ-ಸ್ವತ್ತು ಮಾಡಿಸುವವರಿಂದ ಹಣ ಪಡೆದು ನನಗೆ ನೀಡಿ ಎಂದು ಪಿಡಿಒಗಳ ಬಳಿ ಪರ್ಸೆಂಟೇಜ್ ಕೇಳುತ್ತಾರೆ. ನೇರವಾಗಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಕೇಳಿದಷ್ಟು ಪರ್ಸೆಂಟೇಜ್ ನೀಡಲೇಬೇಕೆಂದು ಕಿರುಕುಳ ಮಾಡುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇಒ ಪರ್ಸೆಂಟೇಜ್ ಕೇಳುವ ಆಡಿಯೋ, ವಿಡಿಯೋವನ್ನು ವೈರಲ್ ಆಗಿತ್ತು.

ಇದೀಗ ಶ್ರೀರಂಗಪಟ್ಟಣ ಇಒ ಭೈರಪ್ಪರನ್ನ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.