ಮನೆ ಅಪರಾಧ ಕೋಲಾರ: ಎಸ್‌ಬಿಐ ಎಟಿಎಂನಿಂದ 27 ಲಕ್ಷ ರೂ. ದೋಚಿದ ಕಳ್ಳರು!

ಕೋಲಾರ: ಎಸ್‌ಬಿಐ ಎಟಿಎಂನಿಂದ 27 ಲಕ್ಷ ರೂ. ದೋಚಿದ ಕಳ್ಳರು!

0

ಕೋಲಾರ: ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ಎಟಿಎಂನಲ್ಲಿ ನಡೆದ ಅತ್ಯಾಧುನಿಕ ದರೋಡೆ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಕಳ್ಳರು ಎಟಿಎಂ ಯಂತ್ರವನ್ನು ಒಡೆದು ಸುಮಾರು ₹27 ಲಕ್ಷ ನಗದು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಎಟಿಎಂ ಸುತ್ತಲಿನ ಸ್ಥಳೀಯರು ನಿತ್ಯದಂತೆ ಹಣ ತೆಗೆದುಕೊಳ್ಳಲು ಬಂದಾಗ, ಎಟಿಎಂ ಯಂತ್ರ ಒಡೆದ ಸ್ಥಿತಿಯಲ್ಲಿ ಕಾಣಿಸಿಕೊಂಡಿತು. ತಕ್ಷಣವೇ ಸ್ಥಳೀಯರು ವಿಷಯವನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರಿಗೆ ಎಟಿಎಂ ಯಂತ್ರವನ್ನು ಸೂಕ್ಷ್ಮವಾಗಿ ಒಡೆದು ಹಣವನ್ನು ಕದ್ದೊಯ್ಯಲಾಗಿದೆ ಎಂಬುದು ದೃಢಪಟ್ಟಿದೆ. ಎಟಿಎಂನಲ್ಲಿ ಅಂದಾಜು ₹27,00,000ಕ್ಕೂ ಹೆಚ್ಚು ಹಣ ಇತ್ತು ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ಪಡೆದ ತಕ್ಷಣವೇ ಕೋಲಾರ ಎಸ್‌ಪಿ ನಿಖಿಲ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ (ಡಾಗ್ ಸ್ಕ್ವಾಡ್) ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹವನ್ನು ಪ್ರಾರಂಭಿಸಿವೆ. ಸಮೀಪದ ಸಿಸಿ ಟಿವಿ ಕ್ಯಾಮೆರಾಗಳ ದೃಷ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.