ಬೆಂಗಳೂರು : ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಯಾಕೆ ಭೇಟಿ ನೀಡಿದ್ದಾರೋ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತಾಡಿದ ಅವರು, ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ಶಾಸಕರ ಅಸಮಾಧಾನದ ಬಗ್ಗೆ ಸಮಾಲೋಚನೆ ನಡೆಸಬಹುದು. ಅನುದಾನ ತಾರತಮ್ಯದ ಬಗ್ಗೆಯೂ ಕರೆದು ಮಾತಾಡಬಹುದು ಎಂದಿದ್ದಾರೆ.
ರಾಜ್ಯಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆದಾಗ ಹೈ ಕಮಾಂಡ್ ನಾಯಕರು ಮಧ್ಯೆ ಪ್ರವೇಶಿಸಿ ಭಿನ್ನಮತ ಶಮನ ಮಾಡೋದು ಸರ್ವೇ ಸಾಮಾನ್ಯ. ಹಿಂದೆಲ್ಲಾ ಹೈ ಕಮಾಂಡ್ ನಾಯಕರು ಬಂದು ಇಲಾಖೆವಾರು ಮೌಲ್ಯಮಾಪನ ಮಾಡೋರು. ಈಗ ಸದ್ಯ ಆ ಬೆಳವಣಿಗೆ ಇಲ್ಲ. ಸುರ್ಜೆವಾಲಾ ಕೂಡ ಶಾಸಕರನ್ನು ಕರೆಸಿ ಮಾತಾಡಬಹುದು ಎಂದು ಹೇಳಿದರು.
2-3 ದಿನ ರಣದೀಪ್ ಸುರ್ಜೆವಾಲಾ ಇಲ್ಲಿ ಇರಬಹುದು. ತಾವು ಕೂಡ ಸಮಾಲೋಚನೆಗೆ ಸಮಯ ಕೇಳಿದ್ದು, ಮುಕ್ತವಾಗಿ ಮಾತುಕತೆ ನಡೆಸೋದಾಗಿದೆ ಪರಂ ಹೇಳಿದರು.














