ಮೈಸೂರು : ನಗರದ ವಕೀಲರು ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ಇಂದು (ಸೆ.13) 150 ವಕೀಲರನ್ನೊಳಗೊಂಡ ತಂಡ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದೆ.
ನಗರದ ಕೋರ್ಟ್ ಅವರಣದಿಂದ ಕಾರುಗಳು ಹಾಗೂ ಎರಡು ಬಸ್‍ಗಳ ಮೂಲಕ ವಕೀಲರ ತಂಡ ಹೊರಟಿದೆ. ವಕೀಲರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ನಂತರ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿ ಈ ಯಾತ್ರೆ ನಡೆಯುತ್ತಿದೆ.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಿರೋಧಿಸಿ ವಕೀಲರು ಈ ಯಾತ್ರೆ ಕೈಗೊಂಡಿದ್ದಾರೆ. ಯಾತ್ರೆ ಆರಂಭಕ್ಕೂ ಮುನ್ನ ಎಲ್ಲರೂ ಕೇಸರಿ ಶಾಲು ಧರಿಸಿ, ಕೇಸರಿ ಧ್ವಜ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. ಸಂಜೆ ವೇಳೆಗೆ ವಕೀಲರ ತಂಡ ಧರ್ಮಸ್ಥಳ ತಲುಪಲಿದೆ.
ಇತ್ತೀಚೆಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ ನೇತೃತ್ವದಲ್ಲಿ ಮೈಸೂರಿನಿಂದ ಧರ್ಮಸ್ಥಳ ಯಾತ್ರೆ ನಡೆದಿತ್ತು. ಇನ್ನೂ ಬಿಜೆಪಿಯ ಹಲವು ನಾಯಕರು ಸಹ ಧರ್ಮಸ್ಥಳಕ್ಕೆ ಬೇಟಿ ನೀಡಿ, ಹೆಗ್ಗಡೆಯವರನ್ನು ಭೇಟಿಯಾಗಿ ನೈತಿಕ ಬೆಂಬಲ ಸೂಚಿಸಿದ್ದರು.














