ವಾಷಿಂಗ್ಟನ್ : ಹೊಸ ವರ್ಷದ ಮುನ್ನಾದಿನ ಉತ್ತರ ಕೆರೊಲಿನಾದಲ್ಲಿ ಯೋಜಿಸಲಾಗಿದ್ದ, ಐಸಿಸ್ ಪ್ರೇರಿತ ದಾಳಿಯನ್ನು ವಿಫಲಗೊಳಿಸಲಾಗಿದೆ. ದಾಳಿ ಸಂಚು ರೂಪಿಸಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಎಫ್‌ಬಿಐ ತಿಳಿಸಿದೆ. ಬಂಧಿತ ಆರೋಪಿಗೆ, 18 ವರ್ಷ ವಯಸ್ಸು.
ಹೊಸ ವರ್ಷದ ಮುನ್ನಾ ದಿನ ದಾಳಿ ನಡೆಸುವ ಯೋಜನೆ ವಿಚಾರ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಆರೋಪಿ ಇನ್ನೂ ಅಪ್ರಾಪ್ತ. ಈತ ವಿದೇಶದಲ್ಲಿ ಐಸಿಸ್ ಸದಸ್ಯನ ಜೊತೆ ಸಂಪರ್ಕದಲ್ಲಿದ್ದ. ಆತನಿಂದ ದಾಳಿ ಕುರಿತು ಸಲಹೆಗಳನ್ನು ಪಡೆದುಕೊಂಡಿದ್ದ. ಅಪ್ರಾಪ್ತ ಆರೋಪಿಯು ಕಳೆದ ಒಂದು ವರ್ಷದಿಂದ ದಾಳಿಗೆ ಯೋಜನೆ ರೂಪಿಸಿದ್ದ. ಅಮಾಯಕರನ್ನು ಕೊಂದು ಜಿಹಾದ್ ಸಾಧಿಸಲು ಮುಂದಾಗಿದ್ದ.
ಉತ್ತರ ಕೆರೊಲಿನಾದಲ್ಲಿ ಹೊಸ ವರ್ಷದ ಮುನ್ನಾದಿನ ಭಯೋತ್ಪಾದಕ ದಾಳಿಯನ್ನು ಎಫ್‌ಬಿಐ ಮತ್ತು ನಮ್ಮ ಕಾನೂನು ಜಾರಿ ಪಾಲುದಾರರು ವಿಫಲಗೊಳಿಸಿದ್ದಾರೆ. ಐಸಿಸ್ ನೇರವಾಗಿಯೇ ದಾಳಿಗೆ ಪ್ರೇರೇಪಿಸಿತ್ತು ಎಂದು ಎಫ್‌ಬಿಐ ಆರೋಪಿಸಿದೆ.
ನಮ್ಮೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಮತ್ತು ಜೀವಗಳನ್ನು ಉಳಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದಾರೆ. ಆರೋಪಿ ಚಾಕುಗಳು ಮತ್ತು ಸುತ್ತಿಗೆಗಳನ್ನು ಬಳಸಿ ದಾಳಿ ನಡೆಸಲು ಯೋಜಿಸಿದ್ದ ಎಂದು ಎಫ್‌ಬಿಐ ತಿಳಿಸಿದೆ.















