ಮನೆ ರಾಜ್ಯ ಕಾರ್ಗಿಲ್ ವಿಜಯ್ ದಿವಸ್: ನಿವೃತ್ತ ಯೋಧರಿಗೆ ಸನ್ಮಾನ

ಕಾರ್ಗಿಲ್ ವಿಜಯ್ ದಿವಸ್: ನಿವೃತ್ತ ಯೋಧರಿಗೆ ಸನ್ಮಾನ

0

ಮೈಸೂರು(Mysuru):  23ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಇಂದು ಯುವ ಭಾರತ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಯೋಧರ ಒಂದು ನೆನಪು ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು.

ಇಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ 20ವರ್ಷಕ್ಕೂ ಹೆಚ್ಚು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 6 ಮಂದಿ ವೀರ ಯೋಧರಿಗೆ ಸನ್ಮಾನ ಮಾಡಲಾಯಿತು.

ಸನ್ಮಾನಿತರು: ಎಂ ವಿ ಕುಮಾರ್, ವಿರುಪಾಕ್ಷಪ್ಪ, ಕೆ ವಿ ಮಹೇಶ್, ಕೆ ಪಿ ಮಹೇಶ್, ಕಾಂತರಾಜು ಬಿ , ಮಂಜು ಸಿ, ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಭಾರತ ದೇಶದ ಕಾರ್ಗಿಲ್ ಯುದ್ದವು ಇಡೀ ಪ್ರಪಂಚವೇ ಎದುರು ನೋಡುತ್ತಿದ್ದ ಯುದ್ಧ. ಕಾರಣ ಬೆಟ್ಟದ ಮೇಲೆ ಪಾಕಿಸ್ತಾನದ ಉಗ್ರಗಾಮಿಗಳು ಮತ್ತು ಕೆಳಭಾಗದಲ್ಲಿ ಯೋಧರ ಜೊತೆ ಯುದ್ಧ ನೆಡೆಯುವುದಿತ್ತು ಅ ಸಂಧರ್ಭದಲ್ಲಿ ನಮ್ಮ ವೀರ ಯೋಧರು ಯುಧವನ್ನು ಗೆದ್ದು ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ತೋರಿಸಿಕೊಟ್ಟರು ಎಂದು ಹೇಳಿದರು.

ಈ ದೇಶದ ಉಳಿವಿಗಾಗಿ ಸೈನಿಕರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಹಾಗೇಯೆ 23 ವರ್ಷಗಳ ಹಿಂದೆ ನಡೆದ  ಕಾರ್ಗಿಲ್ ಯುದ್ದವು ಇಂದಿನ ಯುವಕರಿಗೆ ಸ್ಪೂರ್ತಿ. ಯುದ್ದದಲ್ಲಿ ಮಡಿದ ಯೋಧ ಕುಟುಂಬಕ್ಕೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಮತ್ತು ಅವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ನಾವೆಲ್ಲ ಭಾರತೀಯರು ಚೀನಾ ಪದಾರ್ಥ ಬಹಿಷ್ಕರಿಸೋಣ ಎಂದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ, ಕಾಶ್ಮೀರನ್ನು ಕಬಳಿಸುವ ಹುನ್ನಾರದಿಂದ ಪಾಕಿಸ್ತಾನ ಮಾಡಿದ ಸಮರದಲ್ಲಿ ಸಹಸ್ರಾರು ವೀರಯೋಧರು ತಮ್ಮ ಪ್ರಾಣ ಕಳೆದುಕೊಂಡು ಜಯ ತಂದು ಕೊಡುವ ಮೂಲಕ ಕಾಶ್ಮೀರ ಉಳಿಸಿಕೊಟ್ಟರು. ದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್ ಅವರು ದೇಶದ ಸೈನ್ಯವನ್ನು ಹುರಿದುಂಬಿಸುವ ಮೂಲಕ ಪಾಕಿಸ್ತಾನದ ಸೊಕ್ಕಡಗಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಫಲಾನುಭವಿ ಪ್ರಕೋಷ್ಟ ಸಂಚಾಲಕ ಪರಮೇಶ್ ಗೌಡ, ನಗರಪಾಲಿಕೆ ಸದಸ್ಯ ಜಗದೀಶ್, ಯುವ ಭಾರತ ಸಂಘಟನೆಯ ಸಂಚಾಲಕ ಆನಂದ್ , ಚಾಮರಾಜ ಯುವಮೋರ್ಚಾ ಅಧ್ಯಕ್ಷ ಸಚಿನ್, ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ, ಸಂದೀಪ್ ಸಿ, ಮಾಜಿ ನಗರ ಪಾಲಿಕೆ ಸದಸ್ಯ ರಮೇಶ್, ಅಪೂರ್ವ ಸುರೇಶ್, ಪಂಕಜ್, ಶರತ್,ಶಿವು ,ಸುಚೀಂದ್ರ, ಚಕ್ರಪಾಣಿ, ರಂಗನಾಥ್, ಮಹದೇವಪ್ರಸಾದ್, ರಾಜು ಇದ್ದರು.

ಹಿಂದಿನ ಲೇಖನಗೊರೂರು ಜಲಾಶಯಕ್ಕೆ ಸಚಿವ ಗೋಪಾಲಯ್ಯ ಬಾಗಿನ ಅರ್ಪಣೆ
ಮುಂದಿನ ಲೇಖನಜಮ್ಮು-ಕಾಶ್ಮೀರ: ಗುಂಡು ಹಾರಿಸಿಕೊಂಡು ಬಿಎಸ್ಎಫ್ ಯೋಧ ಆತ್ಮಹತ್ಯೆ