ಮನೆ ಸುದ್ದಿ ಜಾಲ ನಟ ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನರು

ನಟ ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನರು

0

ಅಂದಾಭಿಮಾನದಿಂದ ಕಲಾವಿದರಿಗೆ ಆತಂಕ ಸೃಷ್ಟಿಮಾಡ್ತಿರೋ ಘಟನೆಗಳು ಹೈದ್ರಾಬಾದ್‌ನಲ್ಲಿ ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದೆ. ಇದೀಗ ರಾಮ್‌ಚರಣ್ ಕೂಡ ತೀವ್ರ ಆತಂಕಕ್ಕೊಳಗಾಗಿ ಭಯದಿಂದ ಓಡುವಂತಾಗಿದೆ. ಬೌನ್‌ಸರ್ಸ್‌ಗಳಿದ್ದರೂ ಜನರನ್ನು ತಡೆಯಲಾಗಲಿಲ್ಲ.

ಹೆಗಲ ಮೇಲೆ ಎರಡು ವರ್ಷದ ಪುಟ್ಟ ಮಗುವನ್ನು ಹೊತ್ತುಕೊಂಡು ಅದನ್ನು ಶಾಲಿನಲ್ಲಿ ಮುಚ್ಚಿಕೊಂಡು ಆಸ್ಪತ್ರೆಯೊಳಕ್ಕೆ ಪ್ಲೀಸ್ ಪ್ಲೀಸ್ ಎಂದು ಓಡುವ ದೃಶ್ಯ ವೈರಲ್ ಆಗಿದೆ. ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದೆ. ರಾಮ್‌ಚರಣ್ ಪತ್ನಿ ಉಪಾಸನಾ ಆಸ್ಪತ್ರೆಯಲ್ಲಿ ದಾಖಲಾದ ವೇಳೆ ರಾಮ್‌ಚರಣ್ ಒಳಗೆ ಹೋಗಲು ಹರಸಾಹಸ ಮಾಡಬೇಕಾಗಿ ಬಂತು.

ಕಾರ್‌ನಿಂದ ಇಳಿಯುತ್ತಿದ್ದಂತೆ ಜನರ ಗುಂಪು ಸುತ್ತುವರೆದು ಮೊಬೈಲ್‌ನೊಂದಿಗೆ ಮುಗಿಬಿದ್ರು. ಮಗುವನ್ನೂ ಜೊತೆಯಲ್ಲಿ ಕರೆದುಕೊಂಡು ಬಂದಿದ್ದ ರಾಮ್‌ಚರಣ್ ಕೊಂಚ ವಿಚಲಿತರಾದ್ರು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನದ ಹೆಸರಲ್ಲಿ ಸಾಮಾನ್ಯ ಸೌಜನ್ಯವನ್ನು ಗಾಳಿಗೆ ತೂರಿದ ಕೆಲವರ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮ್‌ಚರಣ್ ಪತ್ನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಮಗಳ ಸಮೇತ ಅವರಸದಲ್ಲಿ ರಾಮ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ವೇಳೆ ಕಾರನ್ನೂ ಸುತ್ತುವರೆದು ಆಸ್ಪತ್ರೆಯೊಳಗೆ ರಾಮ್‌ಚರಣ್‌ಗೆ ಹೋಗಲು ಅವಕಾಶ ಮಾಡಿಕೊಡದೆ ಅಭಿಮಾನಿಗಳು ಸತಾಯಿಸಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ.

ಎಲ್ಲೆಲ್ಲಿ ಯಾವ್ಯಾವ ರೀತಿ ಅಭಿಮಾನ ತೋರಿಸಬೇಕು ಅನ್ನೋದನ್ನೇ ಮರೆತಿರುವುದು ತೀವ್ರ ಆತಂಕ ಪಡುವ ವಿಚಾರ. ಅಂದಹಾಗೆ ಹೈದ್ರಾಬಾದ್‌ನಲ್ಲಿ ಪದೇ ಪದೇ ಹೀಗೆ ಆಗುತ್ತಿದೆ. ಹಿಂದೆ ರಾಜಾಸಾಬ್ ಇವೆಂಟ್‌ನಲ್ಲಿ ನಟಿ ನಿಧಿ ಅಗರ್‌ವಾಲ್, ಆಭರಣ ಜಾಹೀರಾತುವೊಂದಕ್ಕೆ ಆಗಮಿಸಿದ್ದ ನಟಿ ಸಮಂತಾ ಬಳಿಕ ಇದೀಗ ರಾಮ್‌ಚರಣ್ ಜೊತೆ ಆಸ್ಪತ್ರೆಯಲ್ಲಿ ಈ ರೀತಿ ಅಭಿಮಾನಿಗ ದುರ್ವರ್ತನೆ ಆಗಿರುವುದು ಬಲು ಟೀಕೆಗೆ ಗುರಿಯಾಗಿದೆ.