Sringeri : ಹೈಡ್ರಾಮಾ ಗೋಂದಲ ನಡುವೆ ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಶನಿವಾರ ತಡರಾತ್ರಿ ವೇಳೆಗೆ ಮುಕ್ತಾಯಗೊಂಡಿದ್ದು ಎನ್ನಲಾಗಿದೆ, 2023ರಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರು ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆ ಇದೀಗ 52 ಮತಗಳ ಮುನ್ನಡೆ ಸಿಕ್ಕಿದೆ ಎನ್ನಬಹುದು.
ಇಂದು ಡಿ.ಎನ್.ಜೀವರಾಜ್ ಅವರಿಗೆ ಚುನಾವಣಾ ಅಧಿಕಾರಿ ಶಾಸಕ ಪ್ರಮಾಣ ಪತ್ರ ಹಸ್ತಾಂತರಿಸಿದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಅಂದು ರಾಜೇಗೌಡರು ಇವಿಎಂ ಮತಗಳ ಎಣಿಕೆ ವೇಳೆ 324 ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ, ಅಂಚೆ ಮತ ಪತ್ರದಲ್ಲಿ ಜೀವರಾಜ್‌ಗಿಂತ 123 ಮತಗಳ ಹಿನ್ನಡೆ ಉಂಟಾಗಿದ್ದರೂ ಒಟ್ಟಾರೆ 201 ಮತಗಳಿಂದ ಗೆಲುವು ಸಾಧಿಸಿದ್ದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಏ.6 ರಂದು ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ತಿರಸ್ಕೃತ ಮತ ಪರಿಶೀಲನೆ ಹಾಗೂ ಮರು ಎಣಿಕೆಯಲ್ಲಿ ಬಹುಮತ ಸಿಕ್ಕಿದೆ. ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ಪ್ರಮಾಣಪತ್ರ ನೀಡಿಲ್ಲ. ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಿಲ್ಲ, ಕಾಯುತ್ತೇನೆ. ನನ್ನ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದು ಜೀವರಾಜ್ ಅವರು ಹೇಳಿದ್ದಾರೆ ಎನ್ನಲಾಗಿದೆ














