ಮನೆ ಸುದ್ದಿ ಜಾಲ ಮಲ್ಲೇಶ್ವರಂನ 7 ರಸ್ತೆಗಳಲ್ಲಿ ಶೀಘ್ರವೇ ಪೇ ಅಂಡ್ ಪಾರ್ಕಿಂಗ್

ಮಲ್ಲೇಶ್ವರಂನ 7 ರಸ್ತೆಗಳಲ್ಲಿ ಶೀಘ್ರವೇ ಪೇ ಅಂಡ್ ಪಾರ್ಕಿಂಗ್

0

ಬೆಂಗಳೂರು : ನಗರದ ಪ್ರತಿಷ್ಠಿತ ಏರಿಯಾ ಮಲ್ಲೇಶ್ವರಂನಲ್ಲಿ ಪೇ ಅಂಡ್ ಪಾರ್ಕಿಂಗ್ ಶೀಘ್ರವೇ ಆರಂಭವಾಗಲಿದೆ. ಈ ಸಂಬಂಧ ಪೇ ಅಂಡ್ ಪಾರ್ಕಿಂಗ್ ಆರಂಭಕ್ಕೆ ಪಶ್ಚಿಮ ನಗರ ಪಾಲಿಕೆ ಟೆಂಡರ್ ಕರೆದಿದೆ.

ಸದಾ ಶಾಪಿಂಗ್ ಹಬ್ ಆಗಿರುವ ಮಲ್ಲೇಶ್ವರಂನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ರಸ್ತೆಬದಿ, ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನ ನಿಲ್ಲಿಸಿ ‌ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಹೀಗಾಗಿ ಮಲ್ಲೇಶ್ವರದ ಏಳು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಶುರು ಮಾಡಲು ಶೀಘ್ರದಲ್ಲೇ ಆರಂಭಿಸಲು ಟೆಂಡರ್ ಆಹ್ವಾನಿಸಿದೆ.

ಪ್ರತಿ ಗಂಟೆಗೆ ನಾಲ್ಕು ಚಕ್ರದ ವಾಹನಗಳಿಗೆ 30 ರೂಪಾಯಿ ದ್ವಿಚಕ್ರ ವಾಹನಗಳಿಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. ಪೇ ಅಂಡ್ ಪಾರ್ಕಿಂಗ್‌ಗೆ ದಿನದ ಪಾಸ್ ಕೂಡ ವ್ಯವಸ್ಥೆ ಮಾಡುವುದಕ್ಕೂ ಪ್ಲ್ಯಾನ್ ಮಾಡಲಾಗುತ್ತಿದೆ.

ಸಂಪಿಗೆ ರಸ್ತೆ, ಮಲ್ಲೇಶ್ವರಂ 18ನೇ ರಸ್ತೆ, ಮಲ್ಲೇಶ್ವರಂ 15ನೇ ರಸ್ತೆ, ಮಲ್ಲೇಶ್ವರಂ 11ನೇ ರಸ್ತೆ, ಮಲ್ಲೇಶ್ವರಂ 8 ನೇ ರಸ್ತೆ, ಮಲ್ಲೇಶ್ವರಂ 4ನೇ ಮುಖ್ಯ ರಸ್ತೆ, ಮಲ್ಲೇಶ್ವರಂ 2ನೇ ಮುಖ್ಯ ರಸ್ತೆಯಲ್ಲಿ ಆರಂಭದಲ್ಲಿ ಜಾರಿಗೆ ಬರಲಿದೆ.