ಮನೆ ಅಂತಾರಾಷ್ಟ್ರೀಯ 10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ..!

10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ..!

0

ಬೀಜಿಂಗ್ : ಇರಾನ್ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧಗಳನ್ನು ಸ್ಥಿರಗೊಳಿಸಲು ಉನ್ನತ ವ್ಯಾಪಾರ ನಾಯಕರ ನಿಯೋಗವನ್ನು ಹೊತ್ತುಕೊಂಡು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಬೀಜಿಂಗ್‌ಗೆ ಆಗಮಿಸಿದರು.

ಈ ವೇಳೆ ಟ್ರಂಪ್​ಗೆ ಚೀನಿಯರಿಂದ ಅದ್ಭುತ ಸ್ವಾಗತ ದೊರಕಿದೆ. 300 ಚೀನೀ ವಿದ್ಯಾರ್ಥಿಗಳು ಅಮೇರಿಕನ್ ಮತ್ತು ಚೀನೀ ಧ್ವಜಗಳನ್ನು ಬೀಸುತ್ತಾ ಸ್ವಾಗತ ನೀಡಿದರು. ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ 10 ವರ್ಷದ ಹಿಂದೆ ಚೀನಾಕ್ಕೆ ಭೇಟಿ ನೀಡಿದ್ದರು. ಹೀಗಾಗಿ, ಈ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ.