ಮುಂಬೈ : ಷೇರು ಮಾರುಕಟ್ಟೆನಲ್ಲಿ ಆರಂಭಗೊಂಡ ಮೊದಲ 15 ನಿಮಿಷದಲ್ಲೇ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ರೂ. ವೃದ್ಧಿಯಾಗಿದೆ. ಭಾರತದ ಮೇಲಿನ ತೆರಿಗೆಯನ್ನು ಅಮೆರಿಕ 18% ಇಳಿಸಿದ ವಿಚಾರ ಪ್ರಕಟವಾದ ಬೆನ್ನಲ್ಲೇ ಇಂದು ಷೇರು ಮಾರುಕಟ್ಟೆ ಏರಲಿದೆ ಎನ್ನುವುದು ಪಕ್ಕಾ ಆಗಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಗೆ ಬರುತ್ತಿರುವ ಕಾರಣ ಭಾರತದ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚಂಕ್ಯ ನಿಫ್ಟಿ ಏರಿಕೆ ಕಂಡಿದೆ. ಸೆನ್ಸೆಕ್ಸ್ ಆರಂಭದಲ್ಲೇ 3,500 ಅಂಕ ಏರಿಕೆಯಾಗಿದ್ದರೆ ನಿಫ್ಟಿ 1,200 ಅಂಕ ಏರಿಕೆ ಕಂಡಿತ್ತು. ಈ ಮೂಲಕ ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 468.32 ಲಕ್ಷ ಕೋಟಿ ರೂ.ಗೆ ಏರಿತು.
ಆರಂಭದಲ್ಲಿ 25% ಸುಂಕ ವಿಧಿಸಿದ್ದ ಅಮೆರಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡ ವಿಧಿಸಿತ್ತು. ಇದರಿಂದ ಒಟ್ಟು ಸುಂಕ 50% ಏರಿಕೆಯಾಗಿತ್ತು. ವಿದೇಶಿ ಹೂಡಿಕೆದಾರರು ಮರಳಿ ಭಾರತಕ್ಕೆ ಬರುತ್ತಿರುವ ಕಾರಣ ಡಾಲರ್ ಮುಂದೆ ರೂಪಾಯಿ ಮೌಲ್ಯ ಏರಿಕೆ ಕಾಣುತ್ತಿದೆ. ಈ ಎಲ್ಲಾ ಕಾರಣದಿಂದ ಇಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಎರು ಏರಿಕೆ ಕಂಡಿದೆ.















