ಮನೆ ಸುದ್ದಿ ಜಾಲ ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ..!

ವಿಲನ್ ಲುಕ್‌ನಲ್ಲಿ ಫೋಟೋ ಶೂಟ್ – ಮತ್ತೆ ರಜತ್‌ ವಿವಾದ..!

0

ಮೈಸೂರು : ಸಾರ್ವಜನಿಕವಾಗಿ ಮಚ್ಚು ಹಿಡಿದು ರಿಲ್ಸ್ ಮಾಡಿ ಜೈಲಿಗೆ ಹೋಗಿ ಬಂದಿದ್ದ ಬಿಗ್ ಬಾಸ್‌ ಸ್ಪರ್ಧಿ ರಜತ್‌ ಈಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.

ಮೈಸೂರಿನ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಗರೇಟ್ ಸೇದುತ್ತಾ ಫೋಟೋಶೂಟ್ ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವಿಲನ್‌ ಲುಕ್‌ನಲ್ಲಿ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ಫೋಟೋ ಶೂಟ್ ವಿಡಿಯೋವನ್ನು ಇನ್‌ಸ್ಟಾದಲ್ಲಿ ಅಪ್ಲೋಡ್‌ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧವಾಗಿದ್ದರೂ ರೀಲ್ಸ್ ಮಾಡಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಚ್ಚು ಹಿಡಿದು ಫೋಟೊಶೂಟ್ ಮಾಡಿಸಿಕೊಂಡು ರಜತ್‌ ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.