ಮನೆ ರಾಜ್ಯ ಮೈಸೂರಿನ ಜನರಿಗೆ ಉಪಟಳ ನೀಡುತ್ತಿದ್ದ, ಪುಂಡಾನೆ ಸೆರೆ..!

ಮೈಸೂರಿನ ಜನರಿಗೆ ಉಪಟಳ ನೀಡುತ್ತಿದ್ದ, ಪುಂಡಾನೆ ಸೆರೆ..!

0

ಮೈಸೂರು : ಸರಗೂರು ತಾಲೂಕಿನ ಮೊಳೆಯೂರು ವಲಯದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ, ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ವಲಯದ ಮಟದಕಟ್ಟೆ ಬಳಿಯ ಮೂರುಗುಂಡಿ ಹಳ್ಳದಲ್ಲಿ ಸೆರೆ ಹಿಡಿಯಲಾಗಿದೆ. ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇತ್ತೀಚೆಗೆ ಮೊಳೆಯೂರು ಗ್ರಾಮದಲ್ಲಿ ಓರ್ವ ಆದಿವಾಸಿಯನ್ನು ಈ ಆನೆ ಬಲಿ ಪಡೆದಿತ್ತು.

ಕಳೆದ ನಾಲ್ಕು ದಿನಗಳಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸಾಕಾನೆಗಳಾದ ಏಕಲವ್ಯ, ಸುಗ್ರೀವ, ಪ್ರಶಾಂತ, ಅಯ್ಯಪ್ಪ ಆನೆಗಳ ಮೂಲಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಕಾಡಾನೆ ಸೆರೆಹಿಡಿದು ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ.