ನವದೆಹಲಿ : ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂ. ಏರಿಸಲಾಗಿದೆ. ಪರಿಷ್ಕೃತ ದರ ಇಂದು ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ 93 ರೂ.ಗೆ ಏರಿಕೆಯಾಗಿದೆ.
ವಿವಿಧ ಭಾಗಗಳಲ್ಲಿ ಅಥವಾ ವಿತರಕರ (ಗ್ಯಾಸ್ ಕಂಪನಿಗಳು) ಆಧಾರದ ಮೇಲೆ ಬೆಲೆಯಲ್ಲಿ 30 ಪೈಸೆಯಿಂದ 1 ರೂ. ರವರೆಗೆ ವ್ಯತ್ಯಾಸ ಇರಲಿದೆ. ಆಟೋರಿಕ್ಷಾಗಳು, ಕ್ಯಾಬ್‌ಗಳು ವೆಚ್ಚ ಕಡಿಮೆ ಮಾಡಲು ಸಿಎನ್‌ಜಿ ಬಳಸುತ್ತವೆ.
ಸಣ್ಣ ಲಾರಿಗಳು, ಟೆಂಪೋಗಳು ಮತ್ತು ಡೆಲಿವರಿ ವ್ಯಾನ್‌ಗಳು ಸಿಎನ್‌ಜಿ ಇಂಧನ ಬಳಸುತ್ತವೆ. ಸಿಎನ್‌ಜಿ ದರ ಏರಿಕೆಯಿಂದ ಈ ವಾಹನಗಳ ಬಾಡಿಗೆ ಏರಿಕೆಯಾಗಲಿದೆ. ದೇಶಾದ್ಯಂತ ಇಂದಿನಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ.

















