ಮನೆ ಸುದ್ದಿ ಜಾಲ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆ; 13 ಮಂದಿಗೆ ಪೂಜೆಗೆ ಕೋರ್ಟ್ ಅವಕಾಶ..!

ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆ; 13 ಮಂದಿಗೆ ಪೂಜೆಗೆ ಕೋರ್ಟ್ ಅವಕಾಶ..!

0

ಕಲಬುರಗಿ : ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಮತ್ತೆ 13 ಜನರಿಗೆ ಕಲಬುರಗಿ ಕೋರ್ಟ್ ಅವಕಾಶ ಕಲ್ಪಿಸಿದೆ. ಹಿಂದೂ ಮುಖಂಡ ಗುರುಶಾಂತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

13 ಜನರಿಗೆ ಪೂಜೆಗೆ ತೆರಳುವುದಕ್ಕೆ ಅವಕಾಶ ಕಲ್ಪಿಸಿ ನ್ಯಾಯಮೂರ್ತಿ ಇಂದ್ರೀಶ್ ಅವರು ಆದೇಶ ಹೊರಡಿಸಿದ್ದಾರೆ. ಮಧ್ಯಾಹ್ನ 2 ರಿಂದ ಸಂಜೆ 8 ಗಂಟೆಯವರೆಗೆ ಪೂಜೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.

ನಿನ್ನೆ ಕಲಬುರಗಿ ಜಿಲ್ಲಾಡಳಿತಕ್ಕೆ ಹಿಂದೂ ಮುಖಂಡರು ಮನವಿ ಸಲ್ಲಿಕೆ ಮಾಡಿದ್ದರು. ಹಿಂದೂ ಮುಖಂಡರು ಸಲ್ಲಿಸಿದ್ದ ಮನವಿಯನ್ನ ಕಲಬುರಗಿ ಜಿಲ್ಲಾಡಳಿತ ತಿರಸ್ಕರಿಸಿದೆ. ಕಲಬುರಗಿ ಜಿಲ್ಲಾಡಳಿತ ಮನವಿ ತಿರಸ್ಕಾರ ಬೆನ್ನಲ್ಲೆ ಹಿಂದೂ ಮುಖಂಡರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು.