ಮನೆ ಸುದ್ದಿ ಜಾಲ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್

ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳನ್ನು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್

0

ಬಳ್ಳಾರಿ : ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲಾ ಮಕ್ಕಳ ಕನಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ರೆಕ್ಕೆ ನೀಡಿದ್ದಾರೆ. ಬೈ ಸ್ಕೈ ವೀಕ್ಷಣೆಗೆ ಆಗಮಿಸಿದ್ದ 60ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿ, ಮಕ್ಕಳ ಕನಸು ನನಸು ಮಾಡಿದ್ದಾರೆ.

ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಹೆಲಿಕಾಪ್ಟರ್ ನೋಡಲು ಬಂದಿದ್ದ ಸರ್ಕಾರಿ ಶಾಲೆ ಮಕ್ಕಳ ಆಸೆ ಕೇಳಿದ ಸಚಿವರು, ನೀವೂ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಾ ಎಂದು ಕೇಳಿದ್ದಾರೆ. ಸಚಿವರ ಪ್ರಶ್ನೆಗೆ ಮಕ್ಕಳೆಲ್ಲರೂ ಹೌದು ಸರ್ ಎಂದಿದ್ದಾರೆ.

ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಯೂನಿಫಾರ್ಮ್‌ನಲ್ಲಿದ್ದ ಎಲ್ಲಾ ಮಕ್ಕಳಿಗೆ ಸಚಿವರು ರೈಡ್ ವ್ಯವಸ್ಥೆ ಮಾಡಿದ್ದಾರೆ. ಆಕಾಶಕ್ಕೆ ಹಾರಿದ ಮಕ್ಕಳ ಸಂಭ್ರಮ ಕಂಡು ಕೆಳಗಡೆ ನಿಂತಿದ್ದ ಪೋಷಕರು ಆನಂದ ಬಾಷ್ಪ ಸುರಿಸಿದರು. ಮಕ್ಕಳ ಜಾಲಿ ಕಂಡು ಪೋಷಕರೂ ಸಂಭ್ರಮಿಸಿದ್ದಾರೆ.