ಮನೆ ಸುದ್ದಿ ಜಾಲ ಮಲೆ ಮಹದೇಶ್ವರ ಬೆಟ್ಟ – ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ

ಮಲೆ ಮಹದೇಶ್ವರ ಬೆಟ್ಟ – ಚಂದ್ರಗ್ರಹಣವಿದ್ದರೂ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ

0

ಚಾಮರಾಜನಗರ : ಮಾ.3ರಂದು ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಭಕ್ತಾದಿಗಳು ಎಂದಿನಂತೆ ದರ್ಶನ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ತಿಳಿಸಿದ್ದಾರೆ.

ನಾಳೆ (ಮಾ.3) ಮಧ್ಯಾಹ್ನ 3:20ರಿಂದ ಸಂಜೆ 6:47ರವರೆಗೆ ಚಂದ್ರಗ್ರಹಣವಿದ್ದರೂ ಕೂಡ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈ ವೇಳೆಯಲ್ಲಿಯೂ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ತಮ್ಮ ಹರಕೆ, ಕಾಣಿಕೆಗಳನ್ನು ಸಮರ್ಪಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಚಂದ್ರಗ್ರಹಣ ಮುಗಿದ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದ ಆವರಣವನ್ನು ಶುದ್ಧೀಕರಿಸಿ, ವಿಶೇಷ ಪೂಜೆಯ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.