ಮನೆ ಸುದ್ದಿ ಜಾಲ ನಟಿ ಜೂಲಿ ಆರೋಪ : ಗರ್ಭಪಾತಕ್ಕೆ ಸಿಎಂ​ ವಿಜಯ್​ ಕಾರಣ

ನಟಿ ಜೂಲಿ ಆರೋಪ : ಗರ್ಭಪಾತಕ್ಕೆ ಸಿಎಂ​ ವಿಜಯ್​ ಕಾರಣ

0

ಬಿಗ್​ಬಾಸ್ ಸ್ಪರ್ಧಿ, ಮಾಜಿ ನರ್ಸ್​ ಹಾಗೂ ಟಾಲಿವುಡ್​ ನಟಿ ಮಾರಿಯಾ ಜೂಲಿ ತಾವು ಗರ್ಭಪಾತದಿಂದ ಮಗುವನ್ನು ಕಳೆದುಕೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರೇ ಕಾರಣ ಎಂಬ ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟಿದ್ದು ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ  ಅವರ ಬೆಂಬಲಗರಿಂದ ಕಿರುಕುಳದ ನಂತರ ತನಗೆ ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಳೆದ ಮಾರ್ಚ್​ನಲ್ಲಿ ಎಂಟು ಜನರ ವಿರುದ್ಧ ದೂರು ದಾಖಲಿರುವುದಾಗಿ ನಟಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತ್ತಾಗಿ ಟಿವಿಕೆ ಬೆಂಬಲಿಗರಿಂದ ನನ್ನನ್ನು ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಗರ್ಭಧಾರಣೆಯ ಸಮಯದಲ್ಲಿಯೂ ಇವೆಲ್ಲವುಗಳಿಂದ ಮಾನಸಿಕವಾಗಿ ನೊಂದದ್ದೇ ನನ್ನ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ನಟಿ ಹೇಳಿದ್ದಾರೆ. ನನ್ನ ಪತಿಯ ವಿರುದ್ಧ ಪಿತೂರಿ ನಡೆಸಲಾಗಿದೆ. 15 ಲಕ್ಷ ರೂ. ಮೂತ್ರಪಿಂಡ ಹಗರಣದಲ್ಲಿ ಅವರನ್ನು ಸಿಲುಕಿಸಲಾಗಿದೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದರ ಬಗ್ಗೆ ನನಗೆ ನೋಟಿಸ್ ಕಳಿಸಿ, ಹಿಂಸೆ ನೀಡಲಾಗುತ್ತಿದೆ. ಇದರ ಹಿಂದೆ, ಟಿವಿಕೆ ಬೆಂಬಲಿಗ ಮತ್ತು ವಕೀಲರ ಕೈವಾಡವಿದೆ ಎಂದು ನಟಿ ಆರೋಪಿಸಿದ್ದಅರೆ. ಹಾಗೂ “ನಾವು ನಮ್ಮ ಮಗುವನ್ನು ಕಳೆದುಕೊಂಡೆವು. ನಾನು ಇತ್ತೀಚೆಗೆ ಮದುವೆಯಾಗಿದ್ದೆ, ಮತ್ತು ನಾವು ನಮ್ಮ ಮೊದಲ ಮಗುವನ್ನು ಕಳೆದುಕೊಂಡೆವು. ಆನ್‌ಲೈನ್ ಕಿರುಕುಳದಿಂದ ಉಂಟಾದ ತೀವ್ರ ಮಾನಸಿಕ ಯಾತನೆಯಿಂದಾಗಿ ನನ್ನ ಮಗು ಸಾವನ್ನಪ್ಪಿತು. ನಾನು ಇದನ್ನು ಸಹಾನುಭೂತಿಗಾಗಿ ಬಳಸಬಹುದು, ಆದರೆ ನನ್ನ ಉದ್ದೇಶವೆಂದರೆ ನನ್ನ ಗಂಡ ಮತ್ತು ನನ್ನ ಬಗ್ಗೆ ಮಾನನಷ್ಟ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಮಾಡಲಾಗುತ್ತಿದೆ ಎಂದು ನಟಿ ನೋವು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.