ಮಡಿಕೇರಿ : ಮನೆಯೊಳಗಿಟ್ಟಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಾಜಿ ಸಿಆರ್‌ಪಿಎಫ್ ಯೋಧ ಸಾವಿಗೀಡಾದ ಘಟನೆ ತೋಳುರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಹೆಚ್.ಎ.ವೆಂಕಟೇಶ್(64) ಎಂದು ಗುರುತಿಸಲಾಗಿದೆ. ತೋಟದ ಯಂತ್ರಗಳ ಬಳಕೆಗೆ ತಂದಿಟ್ಟಿದ್ದ ಪೆಟ್ರೋಲ್‍ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಯಿಂದ ಹೊರ ಬರಲಾಗದೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಮನೆಯಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಮನೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














