ಮನೆ ಅಪರಾಧ ಖೋಟಾ ನೋಟ ಜಾಲದ ಶಂಕೆ: ೪೦ ಲಕ್ಷಕ್ಕೆ ಒಂದು ಕೋಟಿ ಆಫರ್: ವಂಚನೆ

ಖೋಟಾ ನೋಟ ಜಾಲದ ಶಂಕೆ: ೪೦ ಲಕ್ಷಕ್ಕೆ ಒಂದು ಕೋಟಿ ಆಫರ್: ವಂಚನೆ

0

ಚಾಮರಾಜನಗರ : ೪೦ ಲಕ್ಷ ರೂಪಾಯಿ ಕೊಟ್ಟರೆ, ಅಸಲಿಯನ್ನೇ ಹೋಲುವ ೧ ಹಣ ಕೋಟಿ ನೀಡುತ್ತೇವೆ ಎಂದು ನಂಬಿಸಿ ವಂಚಿಸಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬೆಂಗಳೂರಿನ ಪಿನಿಕಲ್ ಆಸ್ಪತ್ರೆಯ ಎಂ.ಡಿ ಶಂಕರ್ ಹಾಗೂ ಆತನ ಕಾರು ಚಾಲಕ ರಘು ಎಂಬುವವರು ವಂಚನೆಗೊಳಗದಾವರು. ತೆಳ್ಳನೂರು ಗ್ರಾಮದ ಶಿವು, ಕಣ್ಣೂರಿನ ಮಹೇಶ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ನೌಕರ ಮತೀನ್, ಈತನ ಸ್ನೇಹಿತ ಮೂಷಾ ಸೇರಿದಂತೆ ೯ ಮಂದಿಯ ತಂಡ ವಂಚನೆ ನಡೆಸಿರುವ ಆರೋಪ ಕೇಳಿ ಬಂದಿದೆ.ಶAಕರ್ ಅವರ ಕಾರು ಚಾಲಕ ರಘುಗೆ ಶಿವು ಮತ್ತು ಮಹೇಶ್ ಪರಿಚಯವಿದ್ದು ೪೦ ಲಕ್ಷ ರೂಪಾಯಿ ಕೊಟ್ಟರೆ, ಅಸಲಿ ಹಣವನ್ನು ಹೋಲುವ ೧ ಕೋಟಿ ಹಣ ನೀಡುತ್ತೇವೆ ಎಂದು ಹೇಳಿ ನಂಬಿಸಿದ್ದರು. ೨೦೨೧ರ ಡಿಸೆಂಬರ್ ೧೨ರಂದು ಮೂಷಾ ಹಾಗೂ ಮತೀನ್, ರಘುವಿಗೆ ೫೦೦ ರೂಪಾಯಿಯ ೧೦ ನೋಟುಗಳನ್ನು ನೀಡಿ, ಇದನ್ನು ಖರ್ಚು ಮಾಡಿ ಇದರಿಂದ ಯಾರಿಗೂ ಸಂದೇಹ ಬರುವುದಿಲ್ಲ ಎಂದು ಹೇಳಿದ್ದಾರೆ. ಅದರಂತೆ ಶಂಕರ್ ಮತ್ತು ರಘು ಹಣವನ್ನು ಖರ್ಚು ಮಾಡಿದ್ದು, ಯಾರೊಬ್ಬರಿಗೂ ಸಂದೇಹ ಬಂದಿರುವುದಿಲ್ಲ. ಬಳಿಕ ಡಿಸೆಂಬರ್ ೭ರಂದು ಅದೇ ರೀತಿ ಶ್ರೀರಂಗಪಟ್ಟಣಕ್ಕೆ ತೆರಳಿ ಮೂಷಾ ಹಾಗೂ ಮತೀನ್ಗೆ ೧೦ ಲಕ್ಷ ನೀಡಿ ೫೦ ಸಾವಿರ ಪಡೆದಿದ್ದಾರೆ.
ಮೊದಲೇ ಒಪ್ಪಂದವಾದAತೆ ಇನ್ನುಳಿದ ೨೫ ಲಕ್ಷ ರೂಪಾಯಿ ಹಣ ೫ ಲಕ್ಷದ ಖಾಲಿ ಚೆಕ್ ಅನ್ನು ಡಿಸೆಂಬರ್ ೧೫ರಂದು ಕೊಳ್ಳೇಗಾಲದ ಗುಂಡೇಗಾಲ ಸಮೀಪ ನೀಡಿದ್ದಾರೆ. ಆದರೆ ೧ ಕೋಟಿ ನೀಡದೇ ವಂಚಿಸಿ ಪರಾರಿಯಾಗಿದ್ದಾರೆ. ಡಿಸೆಂಬರ್ ೨೨ ಹಾಗೂ ಜನವರಿ ೫ರಂದು ಆರೋಪಿಗಳು ಶಂಕರ್ಗೆ ಕರೆ ಮಾಡಿ ನಿನ್ನ ಹಣ ನಿನಗೆ ಬರುತ್ತದೆ. ಮೋಸ ಆಗುವುದಿಲ್ಲ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಧಮ್ಕಿಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳಿಂದ ಮೋಸ ಹೋದ ಶಂಕರ್ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬAಧ ಪ್ರಕರಣ ದಾಖಲಾಗಿದ್ದು ಸಬ್ ಇನ್ಸೆ÷್ಪಕ್ಟರ್ ಮಂಜುನಾಥ್ ಕ್ರಮ ತೆಗದುಕೊಂಡಿದ್ದಾರೆ.
ಖೋಟಾ ನೋಟು ಜಾಲದ ಶಂಕೆ: ವಂಚನೆಗೊಳಗಾದ ಶಂಕರ್ ಮತ್ತು ರಘುವಿಗೆ , ಶಿವು ಮತ್ತು ಮಹೇಶ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ನೌಕರ ಮತೀನ್ಗೆ ಪರಿಚಯವಿದ್ದು ೪೦ ಲಕ್ಷ ಕೊಟ್ಟರೆ ೧ ಕೋಟಿ ಅಸಲಿಯನ್ನೇ ನೀಡುತ್ತೇವೆ ಎಂದು ಪದೇ ಪದೇ ಹೇಳಿ ನಂಬಿಸಿದ್ದಾರೆ ಎನ್ನಲಾಗಿದ್ದು. ಈ ಪ್ರಕರಣದ ತೆರೆಯಲ್ಲಿ ನಕಲಿ ನೋಟಿನ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯಲ್ಲಿ ಪ್ರಕರಣ ಸತ್ಯಾಂಶ ಹೊರ ಬೀಳಬೇಕಾಗಿದೆ.

ಹಿಂದಿನ ಲೇಖನಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್
ಮುಂದಿನ ಲೇಖನಜೂನ್ ಹೊತ್ತಿಗೆ 4,500 ತರಗತಿಗಳ ಡಿಜಿಟಲೀಕರಣ ಸಂಪೂರ್ಣ: ಅಶ್ವತ್ಥನಾರಾಯಣ