ಬೆಂಗಳೂರು : ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಯಾವುದಕ್ಕೆ ಎಷ್ಟು ಅನುದಾನ ಮಿಸಲಿಡಲಾಗಿದೆ ಎಂಬ ಮಾಹಿತಿ ಕೆಳಗಿದೆ.
- ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಜಾರಿಗೆ 100 ಕೋಟಿ ರೂ.
- ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಮಿಲೆಟ್ ಹಬ್ ಏಕಗವಾಕ್ಷಿ ವ್ಯವಸ್ಥೆ
- ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ ಮಾನ್ಯತೆ.
- ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಸಹಾಯಧನದಲ್ಲಿ ಹೆಚ್ಚಳ.
- ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತ’ ಕಾರ್ಯಕ್ರಮ.
- ಬೆಳೆಗಳಲ್ಲಿ ಕೀಟ ಹಾಗೂ ರೋಗಗಳ ನಿಯಂತ್ರಣಕ್ಕೆ ʻಸಸ್ಯ ಸಂಜೀವಿನಿ’ ಯೋಜನೆ.
- ರೈತ ಕರೆ ಕೇಂದ್ರವನ್ನು AI ತಂತ್ರಜ್ಞಾನದಿಂದ ಉನ್ನತೀಕರಣ.
- ಕೃಷಿಯಲ್ಲಿ ಉತ್ಪಾದನಾ ವೆಚ್ಚ ಕಡಿತಕ್ಕೆ ಹೈಟೆಕ್ ಹಾರ್ವೆಸ್ಟರ್ ಹಬ್’ ಯೋಜನೆಯಡಿ ಬಿತ್ತನೆ ಮತ್ತು ನಾಟಿ ಯಂತ್ರಗಳ ಸೇರ್ಪಡೆ.
- ಚಿತ್ರದುರ್ಗದ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ?ಕೃಷಿ ಉದ್ದಿಮೆ ಕೇಂದ್ರ’ವನ್ನಾಗಿ ಉನ್ನತೀಕರಣ
- ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಜಾರಿ
- ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಗೆ ಪರ್ಯಾಯ ತೇವ-ಒಣಗಿಸುವ ವಿಧಾನಗಳಿಗೆ ಉತ್ತೇಜನ.
- ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಎಂಎಸ್‍ಐಎಲ್ ವತಿಯಿಂದ ರೈತ ಮಾಲ್‍ಗಳ ಸ್ಥಾಪನೆ.
ತೋಟಗಾರಿಕೆ :-
- ತೋಟಗಾರಿಕಾ ಇಲಾಖೆಯ ಕ್ಷೇತ್ರಗಳಲ್ಲಿ ಮತ್ತು ನರ್ಸರಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ತೋಟಗಾರಿಕೆ ಆಧಾರಿತ ಕೈಗಾರಿಕೆಗಳ ಸ್ಥಾಪನೆ.
- ಅಡಿಕೆ ಮತ್ತು ತೆಂಗು ಬೆಳೆಗಳಲ್ಲಿ ಸಮುದಾಯ ಆಧಾರಿತ ರೋಗ-ಕೀಟ ನಿಯಂತ್ರಣ ಕ್ರಮಗಳಿಗಾಗಿ 10 ಕೋಟಿ ರೂ.
- ತೋಟಗಾರಿಕೆ ಉತ್ಪನ್ನಗಳಿಗಾಗಿ 64 ಕೋಟಿ ರೂ.ಗಳಲ್ಲಿ 12,000 ಮೆಟ್ರಿಕ್ ಟನ್ ಸಾಮಥ್ರ್ಯದ ಎರಡು ಶೀತಲಗೃಹಗಳ ನಿರ್ಮಾಣ.
- ಮೈಸೂರಿನ ಲಿಂಗಾಂಬುಧಿ ಸಸ್ಯತೋಟದ ಸಮಗ್ರ ಅಭಿವೃದ್ಧಿ.
- ನೀರಿನ ಸಂರಕ್ಷಣೆ ಮತ್ತು ರೋಗಗಳನ್ನು ತಡೆಗಟ್ಟಲು ಮಣ್ಣಿಲ್ಲದ ಕೃಷಿಗೆ ಪ್ರೋತ್ಸಾಹ
ರೇಷ್ಮೆ :-
- ಉತ್ತರ ಕರ್ನಾಟಕದಲ್ಲಿ ಬೆಳೆಯುವ ರೇಷ್ಮೆಗೂಡುಗಳನ್ನು ಎಲ್ಲಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿನ ಸಾಗಾಣಿಕಾ ವೆಚ್ಚ 20 ರೂ. ಗೆ ಹೆಚ್ಚಳ.
- ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್‌ಗಳ ಸ್ಥಾಪನೆ.















