ಮನೆ ರಾಜ್ಯ ಆಟವಾಡುತ್ತ ಸಂಪ್‌ಗೆ ಬಿದ್ದ, ಎರಡೂವರೆ ವರ್ಷದ ಮಗು ಸಾವು..!

ಆಟವಾಡುತ್ತ ಸಂಪ್‌ಗೆ ಬಿದ್ದ, ಎರಡೂವರೆ ವರ್ಷದ ಮಗು ಸಾವು..!

0

ನೆಲಮಂಗಲ : ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮೃತ ಮಗುವನ್ನು ಬ್ಯಾಡರಹಳ್ಳಿಯ ಅಣ್ಣಯ್ಯ ಹಾಗೂ ಋತು ದಂಪತಿಯ ಮಗ ಚಿರಾಗ್‌ ಎಂದು ಗುರುತಿಸಲಾಗಿದೆ.

ದಂಪತಿ ಸಂಬಂಧಿಕರ ಮದುವೆಗೆ ತೆರಳಲು ರೆಡಿಯಾಗುತ್ತಿದ್ದರು. ಕಾರ್ ತೊಳೆಯಲು ಸಂಪಿನ ಕ್ಯಾಪ್‌ ತೆರೆದು ಅಣ್ಣಯ್ಯ ಮನೆಯೊಳಗೆ ತೆರಳಿದ್ದ. ಈ ವೇಳೆ ಆಟವಾಡುತ್ತಿದ್ದ ಚಿರಾಗ್ ಸಂಪ್‌ಗೆ ಬಿದ್ದು ಮೃತ ಪಟ್ಟಿದ್ದಾನೆ. ಮನೆಯಿಂದ ಹೊರಬಂದು ನೋಡಿದಾಗ ಘಟನೆ ಬೆಳಕಿಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.