ರಾಮನಗರ (ಜೂನ್ 12): ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರೇಡ್ ನಡೆದಿದೆ. ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, RTO ಕಚೇರಿಯಲ್ಲಿ ಅಧಿಕಾರಿಗಳು ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹಾಗೂ ಕಳೆದ ಒಂದು ವರ್ಷದ ಅವಧಿಯಲ್ಲಿ 3ನೇ ಬಾರಿ ನಡೆದ ಲೋಕಾಯುಕ್ತ ದಾಳಿ ಇದಾಗಿದ್ದು ಇನ್ನು ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆರ್ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳು ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದರ ಕುರಿತು 3 ತಿಂಗಳು ಕಳೆದರೂ ಸ್ಮಾರ್ಟ್ ಕಾರ್ಡ್ ವಿತರಿಸದೇ ಕಚೇರಿಯಲ್ಲೇ ಶೇಖರಣೆ ಮಾಡಿರುವುದು ಗೊತ್ತಾಗಿದೆ.

ಆದರಿಂದ ಏಜೆಂಟ್ಗಳ ಮೂಲಕ ಬಂದರೇ ಮಾತ್ರ RTO ಕಚೇರಿಯಲ್ಲಿ ಕೆಲಸ ನಡೆಯುತ್ತೆ ಎಂಬ ಆರೋಪವೂ ಇದ್ದು, ಏಜೆಂಟ್ಗಳ ನಡುಗೆ ಹೊಡೆದಾಟ ನಡೆದರೂ ಪ್ರಾದೇಶಿಕ ಸಾರಿಗೆ ಆಯುಕ್ತರು ದೂರು ನೀಡಿಲ್ಲ. ಕಚೇರಿಯಲ್ಲಿ ಗುತ್ತಿಗೆ ನೌಕರರ ದರ್ಬಾರ್ ನಡೆಯುತ್ತಿದ್ದು, ಎಸ್ಪಿ ಸ್ನೇಹಾ ಪ್ರಶ್ನೆಗಳಿಗೆ ಆರ್ಟಿಒ ಟಿ.ಎ.ಸತೀಶ್ ಬಾಬು ತಬ್ಬಿಬ್ಬಾಗಿದ್ದಾರೆ ಏಂದು ತಿಳಿದುಬಂದಿದೆ.















