ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೊಸತೊಡಕು ಜೋರಾಗಿದೆ. ಮಾಂಸಪ್ರಿಯರು ಬೆಳ್ಳಂಬೆಳಗ್ಗೆ ಚಿಕನ್, ಮಟನ್ಗಾಗಿ ಸ್ಟಾಲ್ಗಳಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡುಬಂತು.
ಹೊಸತೊಡಕು ಹಿನ್ನೆಲೆ ಮಟನ್ ದರ 900 ರೂ. ಗಡಿ ದಾಟಿದೆ. ಮಟನ್, ಚಿಕನ್ ಸ್ಟಾಲ್ ಮಾಲೀಕರಿಂದ ಭರ್ಜರಿ ವ್ಯಾಪಾರ ಆಗುತ್ತಿದೆ. ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಕುರಿ, ಮೇಕೆ, ನಾಟಿ ಮತ್ತು ಫಾರಂ ಕೋಳಿಗಳನ್ನು ತರಿಸಿಕೊಂಡಿದ್ದಾರೆ.
ಈಗಾಗಲೇ ಕೋಳಿ, ಕುರಿಗಳ ಮಾಂಸಕ್ಕೆ ಭಾರಿ ಬೇಡಿಕೆ ಇದೆ. ನಸುಕಿನ 5 ಗಂಟೆಯಿಂದಲೇ ಸಿಟಿಯಲ್ಲಿ ಇರುವ ಮಾಂಸದಂಗಡಿಗಳು ತೆರೆದಿವೆ. ವ್ಯಾಪಾರ ಜೋರಾಗಿ ನಡೆಯುತ್ತಿದೆ. ಚಿಕನ್, ಮಟನ್ ಖರೀದಿಸಿ ಜನರು ಮನೆಗಳಲ್ಲಿ ಮಾಂಸದಡುಗೆ ಮಾಡಿ ಭರ್ಜರಿ ಬಾಡೂಟ ಮಾಡಲಿದ್ದಾರೆ.















