ಮನೆ ಸುದ್ದಿ ಜಾಲ ಪೆಟ್ರೋಲ್, ಡೀಸೆಲ್ ಕೊರತೆ ವದಂತಿ – ಬಂಕ್‌ಗೆ ಮುಗಿಬಿದ್ದ ಜನ

ಪೆಟ್ರೋಲ್, ಡೀಸೆಲ್ ಕೊರತೆ ವದಂತಿ – ಬಂಕ್‌ಗೆ ಮುಗಿಬಿದ್ದ ಜನ

0

ಶಿವಮೊಗ್ಗ : ಇರಾನ್ – ಇಸ್ರೇಲ್ ನಡುವೆ ಯುದ್ಧ ಮುಂದುವರಿದ ಪರಿಣಾಮ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಹರಡಿದ್ದು, ಪೆಟ್ರೋಲ್ – ಡೀಸೆಲ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ 3 ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಖಾಲಿ ಹಿನ್ನೆಲೆ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ವದಂತಿ ಹರಡಿತ್ತು. ಈ ಹಿನ್ನೆಲೆ ಇಂದನ ಲಭ್ಯವಿದ್ದ ಹೆಚ್‌ಪಿ ಪೆಟ್ರೋಲ್ ಬಂಕ್‌ಗೆ ಜನರು ಮುಗಿಬಿದ್ದಿದ್ದಾರೆ.

ವಾಹನದ ಜೊತೆಗೆ ಖಾಲಿ ಬಾಟಲ್‌ಗಳನ್ನ ಸಹ ತಂದ ಜನರು ಕ್ಯೂನಲ್ಲಿ ನಿಂತು ವಾಹನ ಹಾಗೂ ಕ್ಯಾನ್‌ಗಳಿಗೆ ಇಂಧನ ಭರ್ತಿ ಮಾಡಿಕೊಂಡಿದ್ದಾರೆ. ವದಂತಿ ಹರಡಿದ ಬೆನ್ನಲ್ಲೇ ಇಂಧನ ಕೊರತೆಯಿಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಬಂಕ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.