ಮಂಡ್ಯ : ನಗರದಲ್ಲಿ ರಾಜಕಾರಣಿಗಳಿಗೆ ಪೈಪೋಟಿ ಕೊಡುವಂತೆ ರಾರಾಜಿಸುತ್ತಿದ್ದ ಎಸ್ಪಿ ಶೋಭಾರಾಣಿ ಅವರ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ವರದಿಗಳು ಬಿತ್ತರವಾರದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.
ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದಾದ್ಯಂತ ಶೋಭಾರಾಣಿ ಅವರ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಸಹ ಕಾರಣವಾಗಿತ್ತು. ಈ ಸಂಬಂಧಿಂತ ಸುದ್ದಿಗಳು ಪ್ರಸಾರವಾಗಿತ್ತು. ಇದೀಗ ಎಚ್ಚೆತ್ತ ಎಸ್ಪಿ ಶೋಭಾರಾಣಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೊಸ್ಟ್ ಹಂಚಿಕೊಂಡಿದ್ದಾರೆ.
ನನ್ನ ಭಾವಚಿತ್ರವನ್ನು ಬಳಸಿಕೊಂಡು ಯಾವುದೇ ಫ್ಲೆಕ್ಸ್ ಬ್ಯಾನರ್ ಹಾಗೂ ಪ್ರಚಾರ ಕಾರ್ಯಗಳನ್ನು ಬಳಸಬೇಡಿ. ಕಾನೂನು ಮತ್ತು ವೈಯಕ್ತಿಕ ಗೌರವ ಕಾಪಡೋದು ನನ್ನ ಕರ್ತವ್ಯವಾಗಿದೆ. ದಯವಿಟ್ಟು ನನ್ನ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.















