ಮನೆ ಸುದ್ದಿ ಜಾಲ ಮಾಂಸದ ವ್ಯಾಪಾರಿಗಳಿಂದ ಪಾರಾಗಿ, ಮರಳಿ ಹಳ್ಳಿ ಸೇರಿದ ನಾಯಿಗಳು

ಮಾಂಸದ ವ್ಯಾಪಾರಿಗಳಿಂದ ಪಾರಾಗಿ, ಮರಳಿ ಹಳ್ಳಿ ಸೇರಿದ ನಾಯಿಗಳು

0

ಬೀಜಿಂಗ್‌ : ನಮ್ಮಲ್ಲಿ ಬೀದಿನಾಯಿಗಳ ಹಾವಳಿ ಹೇಗಿದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ಚೀನಾದಲ್ಲಿ ನಾಯಿ ಮಾಂಸದ ವ್ಯಾಪಾರಿಗಳು ಸಾಕಿರುವ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಾರೆ.

ಮಾಂಸದ ವ್ಯಾಪಾರಿಗಳು ಹಿಡಿದುಕೊಂಡು ಹೋಗಿದ್ದ ನಾಯಿಗಳ ಪೈಕಿ ಒಂದೇ ಗ್ರಾಮದಲ್ಲಿದ್ದ 7 ನಾಯಿಗಳು ತಪ್ಪಿಸಿಕೊಂಡಿತ್ತು. ಕೊನೆಗೆ ಈ ನಾಯಿಗಳು ತಮ್ಮ ಹಳ್ಳಿಗೆ ಮರಳಲು 17 ಕಿಲೋಮೀಟರ್ ಪ್ರಯಾಣ ಬೆಳೆಸಿದೆ.

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಮಾರ್ಚ್ 16 ರಂದು ಜಿಲಿನ್ ಪ್ರಾಂತ್ಯದ ಚಾಂಗ್‌ಚುನ್‌ನ ಹೆದ್ದಾರಿಯಲ್ಲಿ ನಾಯಿಗಳ ಗುಂಪು ಸಾಲಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಚೀನಾದ ನಿವಾಸಿ ಲೂ ಎಂಬುವವರು ವಿಡಿಯೋ ಮಾಡಿದ್ದಾರೆ. ಲೂ ಮೊದಲು ಈ ನಾಯಿಗಳನ್ನು ಅವರ ಹಳ್ಳಿಯಿಂದ ಸುಮಾರು 17 ಕಿ.ಮೀ. ದೂರದ ಹೆದ್ದಾರಿಯಲ್ಲಿ ಗುರುತಿಸಿದ್ದರು. ಹಾಗಾಗಿ ಈಗ ಈ ಸತ್ಯ ಬೆಳಕಿಗೆ ಬಂದಿದೆ.