ಮೈಸೂರು : ಹಳೇಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ವತಿಯಿಂದ ಸೋಮವಾರ ಧರಣಿ ನಡೆಸಲಾಯಿತು. ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಹಾಗೂ ಅಶೋಕಪುರಂ ದಲಿತ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ಒಳ ಮೀಸಲಾತಿ ವರದಿಯನ್ನು ತಿರಸ್ಕರಿಸುವಂತೆ ಆಗ್ರಹ ವ್ಯಕ್ತವಾಯಿತು.
ನಗರದ ಅಶೋಕಪುರಂನಿಂದ ನೂರಾರು ಮಂದಿ ಬೈಕ್ ರ್ಯಾಲಿ ನಡೆಸಿದರು. ದಲಿತ ಸಂಘಟನೆಗಳು ವರುಣಾ ಮತ್ತು ತಿ. ನರಸೀಪುರದಿಂದ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಧರಣಿ ನಡೆಸಿದರು.
ಬನ್ನೂರು ರಸ್ತೆಯ ಗೌತಮ ಬುದ್ಧ ವೃತ್ತದ ಆವರಣದಲ್ಲಿ ನಡೆದ ಧರಣಿ ಸಭೆಯಲ್ಲಿ ಲೇಖಕ ಸಿ.ಹರಕುಮಾರ್ ಮಾತನಾಡಿ, ಒಳ ಮೀಸಲಾತಿ ಹಾದಿಬೀದಿ ರಂಪಾಟ ಆಗಿದೆ. ಸರಕಾರ ಒಳ ಮೀಸಲಾತಿ ನಿರ್ಧಾರದಿಂದ ಹಿಂದೆ ಸರಿಯಬೇಕು. ಕಡ್ಡಾಯವಾಗಿ ಜಾರಿ ಮಾಡಬೇಕಾದರೆ ನ್ಯಾಯಾಲಯದ ವಿಮರ್ಶೆಗೆ ಒಳಪಡಿಸಬೇಕು. 101 ಜಾತಿಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪಿ.ಎಂ. ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಣ್ಣ, ವಕೀಲ ತಿಮ್ಮಯ್ಯ, ಯುವ ಮುಖಂಡ ಭರತ್ ರಾಮಸ್ವಾಮಿ ಮಾತನಾಡಿದರು. ಜ್ಞಾನ ಸ್ವರೂಪಾನಂದ ಸ್ವಾಮೀಜಿ, ಮಾಜಿ ಶಾಸಕ ಹರ್ಷವರ್ಧನ್, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಡಾ.ಮರಿದೇವಯ್ಯ, ಲೇಖಕ ಸಿದ್ದಸ್ವಾಮಿ, ಡಾ.ಜ್ಞಾನಪ್ರಕಾಶ, ವಕೀಲ ಎ.ಆರ್.ಕಾಂತರಾಜ್, ಸೋಮಯ್ಯ ಮಲೆಯೂರು, ಜಿ ಮಹದೇವ,
ಅಮ್ಮ ರಾಮಚಂದ್ರ, ವಿ.ರಾಮಸ್ವಾಮಿ, ಗೋವಿಂದರಾಜು, ಗಾಂಧಿನಗರದ ಸಿದ್ದಪ್ಪ, ಅಶೋಕಪುರಂ ಆಟೊ ಪುಟ್ಟರಾಜು, ಡಾ.ಆನಂದ್, ಡಾ.ಲೀಪ್ ನರಸಯ್ಯ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಮಣಿಯಯ್ಯ, ವರಹಳ್ಳಿ ಆನಂದ್, ಡಾ.ನಟರಾಜ್ ಶಿವಣ್ಣ, ಕಲ್ಲಹಳ್ಳಿ ಕುಮಾರ್, ಮಲ್ಲೇಶ್, ವಕೀಲರಾದ ಪುಟ್ಟರಸ, ಸೂರ್ಯದೇವ್, ಮಾಜಿ ನಗರಸಭಾ ಸದಸ್ಯ ವಕೀಲ ಮಹೇಶ್ ಎಸ್.ಪಿ. ರಮೇಶ್, ಮಹೇಶ್ ಇರಸವಾಡಿ ಮುಂತಾದವರಿದ್ದರು.















