ಮನೆ ಪ್ರಕೃತಿ ಧಾರಕಾರ ಮಳೆ: ರಸ್ತೆಗೆ ಉರುಳಿದ ಕಲ್ಲು ಬಂಡೆ

ಧಾರಕಾರ ಮಳೆ: ರಸ್ತೆಗೆ ಉರುಳಿದ ಕಲ್ಲು ಬಂಡೆ

0

ಮಡಿಕೇರಿ(Madikeri): ಜಿಲ್ಲೆಯಾದ್ಯಾಂತ ಸೋಮವಾರ ರಾತ್ರಿ ಇಡೀ ಸುರಿಯುತ್ತಿರುವ ಭಾರಿ ಮಳೆಗೆ ತಲಕಾವೇರಿ ಭಾಗಮಂಡಲ ಪ್ರದೇಶದಲ್ಲಿ ಕಲ್ಲು ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದೆ.

ಸತತ 4 ನೇ ದಿನವೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಗೊಂಡಿದ್ದು, ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿಗೆ ಮುರಿದಿವೆ.

ಸೋಮವಾರ ರಾತ್ರಿ ಇಡೀ ಮಡಿಕೇರಿ ನಗರ‌ಕ್ಕೆ ವಿದ್ಯುತ್ ಸರಬರಾಜು ನಿಂತಿತ್ತು. ಬೆಳಿಗ್ಗೆ ವಿದ್ಯುತ್ ಪೂರೈಕೆ ಆಗಿದ್ದರೂ ಕುಶಾಲನಗರ ಸಮೀಪ ವಿದ್ಯುತ್ ಲೈನ್ ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ. ಮಂಗಳವಾರ ಸಂಜೆಯವರೆಗೂ ವಿದ್ಯುತ್ ಪೂರೈಕೆ ಮಡಿಕೇರಿ ನಗರಕ್ಕೆ ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ತಿಳಿಸಿದೆ.

ಎಲ್ಲೆಡೆ ದಟ್ಟ ಮೋಡ ಕವಿದಿದ್ದು ಎಡೆಬಿಡದೆ ಮಳೆ ಸುರಿಯುತ್ತಿದೆ. ಹಾರಂಗಿ ಜಲಾಶಯದಿಂದ 12,866 ಕ್ಯುಸೆಕ್ ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.