ಮೈಸೂರು : ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿಗೆ ತೆರಳಿದ್ದ, ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಸಫಾರಿ ವಾಹನಗಳು ರಸ್ತೆಯಲ್ಲಿದ್ದರೂ ಸಹ ಯಾವುದಕ್ಕೂ ಅಂಜದ ಹುಲಿ, ಅತ್ಯಂತ ಗಾಂಭಿರ್ಯದಿಂದ ರಸ್ತೆಯಲ್ಲೇ ನಡೆದು ಬಂದಿದೆ. ವಾಹನಗಳ ನಡುವೆಯೇ ರಸ್ತೆ ದಾಟಿ ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ.
ಸಫಾರಿಗೆ ತೆರಳಿದ್ದ ಮೈಸೂರಿನ ನಿವಾಸಿ ಸೌಮ್ಯ ಪ್ರಕಾಶ್ ಎಂಬುವವರು ಈ ಸುಂದರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿಯನ್ನು ಇಷ್ಟು ಹತ್ತಿರದಿಂದ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ. ಸೌಮ್ಯ ಪ್ರಕಾಶ್ ಸೆರೆಹಿಡಿದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.















