ಮನೆ ಮನರಂಜನೆ ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ, ವ್ಯಕ್ತಿ ಬಂಧನ..!

ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ, ವ್ಯಕ್ತಿ ಬಂಧನ..!

0

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋ ಕೇಳಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಸೈಬರ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

ಈ ಕುರಿತು ಮಹಾರಾಷ್ಟ್ರ ಸೈಬರ್ ಠಾಣೆಯ ಹೆಚ್ಚುವರಿ ಮಹಾನಿರ್ದೇಶಕ ಯಶಸ್ವಿ ಯಾದವ್ ಮಾತನಾಡಿ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಕ್ಷಯ್ ಕುಮಾರ್ ಅವರ 13 ರ್ಷದ ಮಗಳು ಮೊಬೈಲ್ ಆನ್‌ಲೈನ್ ಗೇಮ್ ಆಡುತ್ತಿದ್ದಾಗ ಆರೋಪಿ ಬೆತ್ತಲೆ ಫೋಟೋಗಳನ್ನು ಕೇಳಿದ್ದ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮುಂಬೈನಲ್ಲಿ ನಡೆದ ಸೈಬರ್ ಜಾಗೃತಿ ಸಂಬಂಧ ನಡೆದ ಸಭೆಯೊಂದರಲ್ಲಿ ಅಕ್ಷಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದರು. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಆ ಗೇಮ್‌ಗಳಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಆಟವಾಡಬಹುದು. ಹಾಗೆಯೇ ನನ್ನ ಮಗಳು ಆಟವಾಡುತ್ತಿದ್ದಾಗ ಆಕೆಯ ಜೊತೆ ಆಡುತ್ತಿದ್ದ ವ್ಯಕ್ತಿ ನೀವು ತುಂಬಾ ಚೆನ್ನಾಗಿ ಆಡವಾಡುತ್ತಿದ್ದೀರಿ,

ನಿಮ್ಮೂರು ಯಾವುದು? ಎಂದು ಕೇಳಿದ. ಅದಕ್ಕೆ ನನ್ನ ಮಗಳು ಮುಂಬೈ ಎಂದಳು. ಆಗ ಮತ್ತೆ ನೀವು ಹುಡುಗ ಅಥವಾ ಹುಡುಗಿಯಾ ಎಂದು ಕೇಳಿದ. ಅದಕ್ಕೆ ಅವಳು ಹುಡುಗಿ ಎಂದಳು. ಅದಾರ ಸ್ವಲ್ಪ ಹೊತ್ತಲ್ಲೇ ಆತ ನಿನ್ನ ಬೆತ್ತಲೇ ಫೋಟೋ ನನಗೆ ಕಳುಹಿಸುತ್ತೀಯಾ ಎಂದು ಕೇಳಿದ. ಕೂಡಲೇ ನನ್ನ ಮಗಳು ಆಟ ಆಡುವುನ್ನೆಲ್ಲ ನಿಲ್ಲಿಸಿದಳು.

ನನ್ನ ಮಗಳು ಅಲ್ಲಿಂದ ಎದ್ದು ಹೋಗಿ ನಡೆದ ವಿಷಯವನ್ನು ನನ್ನ ಹೆಂಡತಿಗೆ ಹೇಳಿದಳು. ಕೆಲ ವಿಷಯಗಳು ಹೀಗೆಯೇ ಪ್ರಾರಂಭವಾಗುತ್ತವೆ. ಇದು ಸೈಬರ್ ಅಪರಾಧದ ಒಂದು ಭಾಗ ಆಗಿದೆ. ಜನರು ಮತ್ತು ಮಕ್ಕಳು ದಾರಿ ತಪ್ಪುತ್ತಾರೆ. ಇದರಿಂದಲೇ ಆತ್ಮಹತ್ಯೆಗಳು ಸಂಭವಿಸುತ್ತವೆ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮಕ್ಕಳು ಇದರ ಬಗ್ಗೆ ಕಲಿಯುವುದು ಬಹಳ ಮುಖ್ಯ ಎಂದು ಹೇಳಿದ್ದರು.